ಕೊಲ್ಲಮೊಗ್ರ:ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರ ಇಲಿನ ಸಹ ಶಿಕ್ಷಕ ಕೆ.ಕೆ ವೆಂಕಟ್ರಮಣ ಕೊಪ್ಪಡ್ಕ ಸೇವಾ ನಿವೃತ್ತಿ ಪಡೆದರು.
ಸುಧೀರ್ಘ 36 ವರ್ಷಗಳ ಸೇವೆ ಸಲ್ಲಿಸಿದ ಇವರು ಕಲ್ಮಕಾರು ಗ್ರಾಮದ ಕೊಪ್ಪಡ್ಕ ದಿl ಕುಶಾಲಪ್ಪ ಕೆ.ಎಸ್ ಮತ್ತು ದಿl ಹೊನ್ನಮ್ಮ ದಂಪತಿಗಳ ಪುತ್ರ. ಪ್ರಾಥಮಿಕ ಶಿಕ್ಷಣವನ್ನು
ಹಿ.ಪ್ರಾ.ಶಾಲೆ ಕಲ್ಮಕಾರು ಇಲ್ಲಿ ಪಡೆದಿದ್ದು ಪ್ರೌಢ ಶಿಕ್ಷಣವನ್ನು ಸುಳ್ಯ ಜೂನಿಯರ್ ಕಾಲೇಜಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಎಸ್. ಎಸ್. ಪಿ.ಯು ಕಾಲೇಜಿನಲ್ಲಿ ಪಡೆದಿದ್ದಾರೆ. ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಅಣ್ಣಾಮಲೈ ವಿಶ್ವವಿದ್ಯಾಲಯ ತಮಿಳುನಾಡು ಇಲ್ಲಿ ಬಿ.ಎಡ್ ಪದವಿ ಪಡೆದಿದ್ದು, ಕರ್ನಾಟಕ ವಿಶ್ವವಿದ್ಯಾಲಯ ದಾರವಾಡ ಇಲ್ಲಿ ಎಂ.ಎ ಪದವಿ ಪಡೆದಿದ್ದಾರೆ .1990 ರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯ ಭೋದನೆ ಮಾಡುತಿದ್ದಾರೆ. ಇವರು ಹೆಚ್ಚುವರಿಯಾಗಿ ಸ್ಕೌಟ್ ಶಿಕ್ಷಣ ನೀಡುತಿದ್ದರು. ಇವರು ಕಲ್ಮಕಾರು ಸರ್ವೊದಯ ಯುವಕ ಮಂಡದ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಲ್ಮಕಾರು ಒಕ್ಕೂಟದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಶ್ರೀ ಮಾಹಾವಿಷ್ಣು ದೈವಸ್ಥಾನ ಗಡಿಕಲ್ಲು ಇದರ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಇವರ ಪತ್ನಿ ಪುಷ್ಪಾವತಿ ಗೃಹಿಣಿ ಪುತ್ರಿ ಸೃಜನಾ ಕೆ.ವಿ ಮತ್ತು ಪುತ್ರ ಹೃತಿಕ್ ಕೆ.ವಿ ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ.