ಸುಳ್ಯ:ನಿವೃತ್ತರಾದ ಕೆಪಿಎಸ್ ಗಾಂಧಿನಗರದ ಪ್ರೌಢಶಾಲಾ ಶಿಕ್ಷಕ ಎಂ.ಚಿನ್ನಪ್ಪ ಗೌಡ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿದ್ದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ ಅವರು ಚಿನ್ನಪ್ಪ ಗೌಡ ಹಾಗು ಲಲಿತಾ ದಂಪತಿಗಳನ್ನು ಸನ್ಮಾನಿಸಿದರು.ಸುಳ್ಯ ತಾಲೂಕು
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಭಿನಂದನಾ ಭಾಷಣ ಮಾಡಿದರು.ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಝ್,ಅಭಿನಂದನಾ ಸಮಿತಿಯ ಅಧ್ಯಕ್ಷೆ ಶೀತಲ್ ಯು.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ವತಿಯಿಂದ ಮತ್ತು ಚಿನ್ನಪ್ಪ ಗೌಡರ ಹಿತೈಷಿಗಳ ವತಿಯಿಂದ ಮತ್ತು ಸಾರ್ವಜನಿಕರ ವತಿಯಿಂದ ಸನ್ಮಾನಿಸಲಾಯಿತು.ಜುಲೈ 31ರಂದು ಚಿನ್ನಪ್ಪ ಗೌಡರು ಸರಕಾರಿ ಸೇವೆಯಿಂದ ನಿವೃತ್ತರಾದರು.












