ಗ್ಲಾಸ್ಗೊ: ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಝಂಡು ಕುಮಾರ್ ಕಂಚಿನ ಪದಕ ಗಳಿಸುವ ಮೂಲಕ ಕಾಮನ್ವೆಲ್ತ್ ಕೂಟದಲ್ಲಿ ಭಾರತವು ಪದಕದ ಖಾತೆ ತೆರೆದಿದೆ. 28 ವರ್ಷದ ಝಂಡು ಕುಮಾರ್ ಅವರು ಮೊದಲ ಪ್ರಯತ್ನದಲ್ಲಿ 181 ಕೆ.ಜಿ. ಎರಡನೇ
ಪ್ರಯತ್ನದಲ್ಲಿ 190 ಕೆ.ಜಿ ತೂಕವನ್ನು ಯಶಸ್ವಿಯಾಗಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 196 ಕೆ.ಜಿ ತೂಕವನ್ನು ಎತ್ತುವಲ್ಲಿ ವಿಫಲರಾದರು. ಒಟ್ಟು 130.9 ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದರು.ನೈಜೀರಿಯಾದ ಇಡ್ರಿಸ್ ರಿಲುವಾನ್ ಚಿನ್ನ, ಬ್ರಿಟನ್ನ ಮ್ಯಾಥ್ಯೂ ಹಾರ್ಡಿಂಗ್ ಬೆಳ್ಳಿ ಪದಕವನ್ನು ಗೆದ್ದರು.








