ಮಂಗಳೂರು:ನಮಗೆ ರಾಜಕೀಯಕ್ಕಿಂತ ಜನರ ಬದುಕು ಮುಖ್ಯ ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.ಮಂಗಳೂರಿನಲ್ಲಿ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.ಎಲ್ಲರ ಚಿಂತನೆಯಂತೆ ನಮ್ಮ
ಸರ್ಕಾರ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.ಗಾಂಧಿ ಅವರು ಉಳಿದುಕೊಂಡಿದ್ದ ಮನೆಗೆ ಹೋಗಿ ಅಲ್ಲಿ ಉಪಹಾರ ಸೇವಿಸಿದೆ. ಮಂಗಳೂರು ಬನ್ಸ್, ದೋಸೆ ಸವಿದೆ ಎಂದು ಅವರು ಹೇಳಿದರು.

ಇಂದು ಬೆಳಗ್ಗೆ ಮಂಗಳೂರಿನ ಗಾಂಧಿ ಸೈರ್ ಕೆಫೆಗೆ ಡಿಕೆಶಿ ಭೇಟಿ ನೀಡಿ ಉಪಾಹಾರ ಸವಿದರು. ಮಹಾತ್ಮಾ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದ ನೆನಪಿಗಾಗಿ ಈ ಕೆಫೆಗೆ ಗಾಂಧಿ ಸೈರ್ ಕೆಫೆ ಎಂದು ಹೆಸರಿಟ್ಟಿದ್ದಾರೆ. ನಮ್ಮ ರಾಜ್ಯದ ಯುವ ಮನಸ್ಸುಗಳ ಜೊತೆ ಕುಳಿತು ಉಪಹಾರ ಸವಿದಿದ್ದೇನೆ, ನನ್ನ ದಿನ ಹೀಗೆ ಆರಂಭವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಪೋಸ್ಟ್ ಮಾಡಿದ್ದಾರೆ.








