ಲಾಸ್ ಎಂಜಲೀಸ್: ಕೆನಡಾ ತಂಡವು ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ರೌಂಡ್ ಆಫ್ 32 ಹಂತದ ಮೊದಲ ಪಂದ್ಯದಲ್ಲಿ ಕೆನಡಾ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು
1-0 ಗೋಲುಗಳ ಅಂತರದಲ್ಲಿ ಮಣಿಸಿ 16ರ ಹಂತಕ್ಕೆ ಲಗ್ಗೆಯಿಟ್ಟಿತ್ತು. ರೋಚಕವಾಗಿ ಸಾಗಿದ ಪಂದ್ಯದ 90+2 ನೇ ನಿಮಿಷದಲ್ಲಿ ಸ್ಟೆಫಾನ್ ಯೂಸ್ಟಾಕ್ವಿಯೋ ಕೆನಡಾ ಪರ ಗೋಲು ಬಾರಿಸಿದರು.ಆ ಮೂಲಕ ಕೆನಡಾ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.
ರೌಂಡ್ ಆಫ್ 32 ಹಂತದ ಪಂದ್ಯದಲ್ಲಿ
ಇಂದು ರಾತ್ರಿ 10.30ಕ್ಕೆ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ಜಪಾನ್ ತಂಡವನ್ನು ಎದುರಿಸಲಿದೆ.





