ಮಂಗಳೂರು:ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಜನತಾ ದರ್ಶನದ ಅಂಗವಾಗಿ ಮಂಗಳೂರಿನ ಪುರಭವನದಲ್ಲಿ ಅರೋಗ್ಯ ಸಚಿವ ಹಾಗೂ ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಆದ ದಿನೇಶ್ ಗುಂಡೂರಾವ್ ಜನತಾ ದರ್ಶನ ನಡೆಸಿದರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ, ಸುಳ್ಯ ತಾಲೂಕಿನ ಹಲವು ಮುಖಂಡರುಗಳು ಭಾಗವಹಿಸಿ ಆಹವಾಲು ಸಲ್ಲಿಸಿದರು.ಸುಳ್ಯಕ್ಕೆ ಸರಕಾರಿ ಬ್ಲಡ್ ಬ್ಯಾಂಕ್ ಅತೀ
ಅವಶ್ಯ ವಾಗಿರುತ್ತದೆ ಆದ್ದರಿಂದ ಸುಳ್ಯ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೆಡ್ ಕ್ರಾಸ್ ಸಹಯೋಗದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ತಾಲೂಕು ರೆಡ್ ಕ್ರಾಸ್ ಉಪ ಸಭಾಪತಿ ಕೆ. ಎಂ. ಮುಸ್ತಫ ಮನವಿ ಸಲ್ಲಿಸಿದರು. ಸುಳ್ಯಸಲ್ಲಿ ದಿನ ನಿತ್ಯ ಅಪಘಾತ, ಹೆರಿಗೆ ಮುಂತಾದ ಪ್ರಕರಣಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗುತ್ತಾ ಇದ್ದು ಅತೀ ಹೆಚ್ಚು ರಕ್ತದಾನಿಗಳು ಮತ್ತು ಬೇಡಿಕೆಗಳು ಹೊಂದಿರುವ ಸುಳ್ಯಕ್ಕೆ
ಸರಕಾರಿ ಬ್ಲಡ್ ಬ್ಯಾಂಕ್ ಅತೀ ಅವಶ್ಯ ವಾಗಿರುತ್ತದೆ. ಆದ್ದರಿಂದ ಸುಳ್ಯ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೆಡ್ ಕ್ರಾಸ್ ಸಹಯೋಗದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸುಳ್ಯ ತಾಲೂಕಿನಲ್ಲಿ ಪ್ಲಾಟಿಂಗ್, ವಿದ್ಯುತ್ ಸಮಸ್ಯೆ ಪರಿಹಾರ ದಫನ ಭೂಮಿ, ಸ್ಮಶಾನ, ಅಭಿವೃದ್ಧಿ ಅನುದಾನ ಮುಂತಾದ ಬೇಡಿಕೆಗಳನ್ನು ಸುಳ್ಯದ ಹಕವು ಮಂದಿ ಮನವಿ ಸಲ್ಲಿಸಿದರು.ನೋಂದಣಿಯಾದ ಪ್ರತೀ ಅರ್ಜಿಗೆ ಪ್ರತ್ಯೇಕ ನಂಬರ್ ನೀಡಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲೇ ಇತ್ಯರ್ಥಗೊಳಿಸಲು ಸೂಚಿಸಲಾಗಿತ್ತು.