ಸುಳ್ಯ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಪೂರ್ಣ ಗೆಲುವು ಸಾಧ್ಯವಾಗಬೇಕು ಎಂದು ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ
ವಿಶೇಷ ಪ್ರಾರ್ಥನೆ ನಡೆಸಲಾಯಿತು. ಭಯೋತ್ಪಾದನೆ ವಿರುದ್ಧ ಭಾರತಕ್ಕೆ
ಗೆಲುವಾಗಬೇಕು, ಪಾಕ್ ಆಕ್ರಮಿತ ಕಾಶ್ಮೀರ ಭಾರತದ ವಶವಾಗಬೇಕು ಭಯೋತ್ಪದನೆ ಸಂಪೂರ್ಣ ನಿಲ್ಲಬೇಲು ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ. ಶಾಂತಿನಗರ, ಕಿಶೋರಿ ಶೇಟ್, ಸುನಿಲ್ ಕೇರ್ಪಳ, ಜಗನ್ನಾಥ ಜಯನಗರ, ದಯಾನಂದ ಕೇರ್ಪಳ, ಪಿ.ಕೆ.ಉಮೇಶ್, ಚಿದಾನಂದ ವಿದ್ಯಾನಗರ, ಸುಧಾಕರ ಕುರುಂಜಿಭಾಗ್, ಕೇಶವ ಮಾಸ್ತರ್, ಬುದ್ಧ ನಾಯ್ಕ್, ಚಂದ್ರು ರಾವ್ ಕೇರ್ಪಳ, ಸೋಮನಾಥ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.







