ಸುಳ್ಯ:ರಾಜ್ಯದ ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತಿದೆ ಎಂದು ಆರೋಪಿಸಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯ ನಗರ ಪಂಚಾಯತ್ ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಕಡೆ ನಡೆದ ಪ್ರತಿಭಟನೆಯಲ್ಲಿ ಪ್ರಮುಖ ಬಿಜೆಪಿ ನೇತಾರರು ಭಾಗವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಉದ್ಘಾಟಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಜನರು ಹಲವು ಯೋಜನೆಗಳಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ, ನಗರ ಪಂಚಾಯತ್ನ ಅಭಿವೃದ್ಧಿಗೆ ಅನುದಾನ ಬರ್ತಾ ಇಲ್ಲ, ಅಧಿಕಾರಿ, ಸಿಬ್ಬಂದಿಗಳ ನೇಮಕ ಆಗದೆ ಜನರು ಬವಣೆ ಪಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಅವರು ಹೇಳಿದರು.
ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್ ಮಾತನಾಡಿ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಆಗದೆ ಜನರು ಬೇಷತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಮಾತನಾಡಿ ಎರಡೂವರೆ ವರ್ಷದ ಕಾಂಗ್ರೆಸ್ ಆಡಳಿತ ವೈಖರಿಯಿಂದ ಜನರು ಸಂಪೂರ್ಣ ಬೇಷತ್ತಿದ್ದಾರೆ.
ಗ್ಯಾರಂಟಿಯ ವಿಷಯದಲ್ಲಿ ಮಾತ್ರ ಆಡಳಿತ ನಡೆಯುತಿದೆ, ಆದರೆ ಗ್ಯಾರಂಟಿ ಕೂಡ ಜನರಿಗೆ ಸರಿಯಾಗಿ ಸಿಗ್ತಾ ಇಲ್ಲಾ ಎಂದು ಆರೋಪಿಸಿದರು. ಅಭಿವೃದ್ಧಿಗೆ ಅನುದಾನ ಬಾರದ ಕಾರಣ ಅಭಿವೃದ್ಧಿ

ಮಾಡುವ ಅವಲಾಶವೇ ಇಲ್ಲದಂತಾಗಿದೆ. ಅಕ್ರಮ ಸಕ್ರಮ, 94 ಸಿ ಮಂಜೂರಾಗುತ್ತಾ ಇಲ್ಲಾ, ಪೋಡಿ ಮುಕ್ತ ಮಾಡುವುದಾಗಿ ಹೇಳಿ ಒಂದು ಗ್ರಾಮದಲ್ಲಿ ಕೂಡ ಸರ್ವೆ ಆಗ್ತಾ ಇಲ್ಲಾ. ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ದೂರಿದರು.
ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ. ಮಾತನಾಡಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಾ ಇಲ್ಲಾ ಯಾವುದೇ ಅಭಿವೃದ್ಧಿಗೆ ಅನುದಾನ ಇಲ್ಲಾ. ಯಡಿಯೂರಪ್ಪ ಅವರು ಸಿಎಂ ಆಗಿದದ್ದಾಗ 5 ಕೋಟಿ ವಿಶೇಷ ಅನುದಾನ ಬಂದ ಸಂದರ್ಭದಲ್ಲಿ ಸುಳ್ಯ ನಗರದ ಎಲ್ಲಾ ರಸ್ತೆಗಳು ಕಾಂಕ್ರೀಟ್ ಆಗಿದೆ. ಆದರೆ ಈಗ ಯಾವುದೇ ಅನುದಾನ ಬಾರದ ಕಾರಣ ಯಾವುದೇ ರಸ್ತೆಗಳು ಅಭಿವೃದ್ಧಿ ಮಾಡಲು ಸಾಧ್ಯ ಆಗ್ತಾ ಇಲ್ಲ ಎಂದು ಹೇಳಿದರು.
ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾರಾಯಣ ಶಾಂತಿನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬೂಡು ರಾಧಾಕೃಷ್ಣ ರೈ ವಂದಿಸಿದರು.
ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ರೈ, ಸುಧಾಕರ ಕುರುಂಜಿಗುಡ್ಡೆ, ಕಿಶೋರಿ ಶೇಠ್, ಶೀಲಾ ಅರುಣ ಕುರುಂಜಿ, ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ,ಪ್ರಮುಖರಾರದ ಸುನಿಲ್ ಕೇರ್ಪಳ, ಕಿರಣ್ ಕುರುಂಜಿ, ದಯಾನಂದ ಕೇರ್ಪಳ, ನವೀನ್ ಕುದ್ಪಾಜೆ, ಕೇಶವ ಮಾಸ್ತರ್ ಹೊಸಗದ್ದೆ, ಅವಿನಾಶ್ ಕುರುಂಜಿ, ಶಿವನಾಥ ರಾವ್, ಚಂದ್ರಶೇಖರ ಕೇರ್ಪಳ, ಶಿವರಾಮ ಕೇರ್ಪಳ,ದಾಮೋದರ ಮಂಚಿ ದಿನೇಶ್ ದುಗ್ಗಲಡ್ಕ, ದೇವರಾಜ್ ಕುದ್ಪಾಜೆ, ಪ್ರದೀಪ್ ಬೂಡು,ಪ್ರಶಾಂತ್ ಕಾಯರ್ತೋಡಿ, ರಂಜಿತ್ ಕುಮಾರ್, ಸೋಮನಾಥ ಪೂಜಾರಿ, ಶ್ವೇಥ, ಸುಲೋಚನ,
ಮತ್ತಿತರರು ಭಾಗವಹಿಸಿದ್ದರು.