ಸುಳ್ಯ: ಸಾಂಸ್ಕೃತಿಕ ಕಲಾ ಕೇಂದ್ರ ಗಾನ ನೃತ್ಯ ಅಕಾಡೆಮಿಯ ಸುಳ್ಯ ಶಾಖೆಯ ಸಂಚಲನಾ ಸಮಿತಿ ರಚನೆ ಮಾಡಲಾಗಿದೆ.ಗಾನ ನೃತ್ಯ ಅಕಾಡೆಮಿಯ ಗುರುಗಳಾದ ವಿದ್ಯಾಶ್ರೀ ರಾಧಾಕೃಷ್ಣ ಅವರು ಹೊಸ ಸಮಿತಿಯನ್ನು

ಕುಸುಮಾಧರ ಎ.ಟಿ, ಲೀಲಾವತಿ ಕೋಲ್ಚಾರ್, ಮಂಜುಶ್ರೀ ರಾಘವ್
ಘೋಷಣೆ ಮಾಡಿದರು.ಅಧ್ಯಕ್ಷರಾಗಿ ಕುಸುಮಾಧರ.ಎ.ಟಿ,
ಉಪಾಧ್ಯಕ್ಷರಾಗಿ ಫ್ರಿಜಿಲ್ ಅಡೂರು ಮತ್ತು ಶ್ಯಾಮಲ ಕೇಶವಮೂರ್ತಿ
ಕಾರ್ಯದರ್ಶಿಯಾಗಿ ಲೀಲಾವತಿ ಕೋಲ್ಚಾರ್
ಉಪ ಕಾರ್ಯದರ್ಶಿಯಾಗಿ ಚೇತನಾ ಅರಂಬೂರು ಮತ್ತು
ಖಜಾಂಜಿಯಾಗಿ ವಿದುಷಿ ಮಂಜುಶ್ರೀ ರಾಘವ್ ಅಯ್ಕೆಯಾಗಿದ್ದಾರೆ ಎಂದು ಗಾನ ನೃತ್ಯ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.ಗಾನ ನೃತ್ಯ ಅಕಾಡೆಮಿಯ ವತಿಯಿಂದ ನೃತ್ಯ ತರಬೇತಿ,ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಅಕಾಡೆಮಿಯ ಕಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿ ಸಂಚಲನಾ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.