ಸುಳ್ಯ:ನಗರದ ಅಧಿಕಾರ ನಡೆಸುವವರೇ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ ಎಂದು ನಗರ ಪಂಚಾಯತ್ ವಿರೋಧ ಪಕ್ಷದ ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಬಿಜೆಪಿಯವರೇ ಅಧಿಕಾರದಲ್ಲಿ ಇದ್ದು ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಪ್ರತಿಭಟನೆ ದಾರಿ ಅಲ್ಲ, ಬದಲಿಗೆ ಅಧಿಕಾರ ಬಿಟ್ಟು ಹೊರಹೋಗಲಿ ಎಂದು ವೆಂಕಪ್ಪ ಗೌಡ ಪ್ರತಿಕ್ರಿಯಿಸಿದ್ದಾರೆ.