ಸುಳ್ಯ:ಬಿಜೆಪಿ ಸುಳ್ಯ ಮಂಡಲದ ವತಿಯಿಂದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ಸಂಘಟನಾತ್ಮಕ ಸಭೆ ಹಾಗೂ ಬಿಎಲ್ಎ-2ಗಳಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಸುಳ್ಯ ವಿಧಾನ ಸಭಾಕ್ಷೇತ್ರದ ವಿವಿಧ ಕಡೆಗಳಲ್ಲಿ ನಡೆಯಿತು. ಕೊಯ್ಲ ಮಹಾಶಕ್ತಿ ಕೇಂದ್ರದ ಸಭೆಯು ಗೊಳಿತೊಟ್ಟು ಸಿದ್ದಿವಿನಾಯಕ ಸಭಾಂಗಣದಲ್ಲಿ, ಕಡಬ ಮಹಾಶಕ್ತಿ ಕೇಂದ್ರದ
ಸಭೆಯ ಕೋಡಿಂಬಾಳ ಭಜಾನಮಂದಿರದಲ್ಲಿ, ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರದ ಸಭೆಯು ಕೈಕಂಬ ಭಜನಾ ಮಂದಿರದಲ್ಲಿ, ಬೆಳ್ಳಾರೆ ಮಹಾಶಕ್ತಿ ಕೇಂದ್ರ ಸಭೆಯು ಜೆ.ಡಿ ಹಾಲ್ ಪೆರುವಾಜೆಯಲ್ಲಿ, ಜಾಲ್ಸೂರು ಮಹಾಶಕ್ತಿ ಕೇಂದ್ರ ಮತ್ತು ಸುಳ್ಯ ನಗರದ ಸಭೆಯು ಪಕ್ಷದ ಕಛೇರಿಯಲ್ಲಿ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಸಭೆಯು ಎಲಿಮಲೆಯಲ್ಲಿ ನಡೆಯಿತು.
ಸಭೆಯಲ್ಲಿ ಎಸ್ಐಆರ್ಗೆ ಸಂಬಂಧಿಸಿದ ವಿಚಾರಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ವಿವಿಧ ಜವಾಬ್ದಾರಿಗಳಿಗೆ ಕಾರ್ಯಕರ್ತರನ್ನು ನೇಮಿಸಲಾಯಿತು.
ವಿವಿಧ ಕಡೆಗಳಲ್ಲಿ ನಡೆದ ಸಭೆಗಳಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಗೂ ಸುಳ್ಯ ಮಂಡಲ ಉಸ್ತುವಾರಿ ಪ್ರಸನ್ನ ಮಾರ್ತ,ಜಿಲ್ಲಾ ಉಪಾಧ್ಯಕ್ಷ ರಾಕೇಶ ರೈ ಕೆಡೆಂಜಿ,ಜಿಲ್ಲಾ ಕಾರ್ಯದರ್ಶಿ ಪುಷ್ಪ ಮೇದಪ್ಪ, ವಿಕಸಿತ ಭಾರತ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಹರೀಶ ಕಂಜಿಪಿಲಿ,ಪ್ರಕೋಷ್ಠಗಳ ಜಿಲ್ಲಾ ಸಂಚಾಲಕ ಸುಧೀರ್ ಶೆಟ್ಟಿ, ಸಹಾ ಸಂಚಾಲಕ ಪ್ರಸನ್ನ ದರ್ಬೆ,ಜಿಲ್ಲಾ ಎಸ್ಟಿ ಮೊರ್ಚಾ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಶಿವಪ್ರಸಾದ್,ತೇಜಸ್ವಿನಿ ಕಟ್ಟಪುಣಿ,ಮಹಿಳಾ ಮೊರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ, ಎಸ್ .ಟಿ.ಮೊರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ,ಮಹಾಶಕ್ತಿ ಕೇಂದ್ರದ ,ಶಕ್ತಿ ಕೇಂದ್ರ ಪ್ರಮುಖರು, ಬಿಎಲ್ಡ 2ಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.













