ತಿರುವನಂತಪುರಂ:ಕೇರಳದಲ್ಲಿ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಯೋಜನೆ ಇದೇ ಜೂನ್ 15ರಿಂದ ಜಾರಿಗೆ ಬರಲಿದೆ. ಯುಡಿಎಫ್ ನೀಡಿದ ಇಂದಿರಾ ಗ್ಯಾರಂಟಿ ಭರವಸೆಯಂತೆ ಯೋಜನೆ ಜಾರಿಯಾಗಲಿದೆ. ಯೋಜನೆಗೆ ಪ್ರಿಯದರ್ಶಿನಿ ಯೋಜನೆ ಎಂದು ನಾಮಕರಣ ಮಾಡಲಾಗಿದೆ ಎಂದು
ಮುಖ್ಯಮಂತ್ರಿ ವಿ. ಡಿ. ಸತೀಶನ್ ಘೋಷಿಸಿದ್ದಾರೆ.ಮೊದಲ ಹಂತದಲ್ಲಿ ಆರ್ಡಿನರಿ ಬಸ್ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ. ವಯೋಮಾನ ಮತ್ತಿತರ ವಿಷಯಗಳ ಭಿನ್ನತೆ ಇಲ್ಲದೇ ಎಲ್ಲಾ ಮಹಿಳೆಯರಿಗೂ ಈ ಸೌಲಭ್ಯ ಒದಗಲಿದೆ ಎಂದು ಸಿಎಂ ಪ್ರಕಟಿಸಿದ್ದಾರೆ.ಪ್ರಸ್ತುತ ಯೋಜನೆ ಜಾರಿಗೊಳಿಸಲು ಪ್ರತಿ ತಿಂಗಳು ಸರಕಾರಕ್ಕೆ 75 ಕೋಟಿ ಹೆಚ್ಚುವರಿ ಖರ್ಚು ಅಗತ್ಯವಾಗಿದ್ದು, ಅದನ್ನು ಸರಕಾರ ಭರಿಸಿಕೊಳ್ಳಲಿದೆ ಎಂದವರು ಹೇಳಿದರು.
ಆರ್ಡಿನರಿ ಬಸ್ಗಳು ಅತ್ಯಂತ ಕಡಿಮೆ ಇರುವ ಕಾಸರಗೋಡು ಸಹಿತ ಮಲಬಾರ್ ವಲಯಕ್ಕೆ ಯೋಜನಾ ಸೌಲಭ್ಯ ಹೇಗೆ ಒದಗಿಸಬಹುದು ಎಂಬುದರ ಕುರಿತು ಸರಕಾರ ಅಧ್ಯಯನ ನಡೆಸಿ ಕ್ರಮ ಕೖಗೊಳ್ಳುವುದೆಂದೂ ಅವರು ತಿಳಿಸಿದರು.ಆರ್ಡಿನರಿ ಬಸ್ ಗಳು ಕೇರಳದ ತೆಂಕಣ ಭಾಗದ ಏಳು ಜಿಲ್ಲೆಗಳಲ್ಲಷ್ಟೇ ಹೇರಳವಾಗಿದೆ. ಕಾಸರಗೋಡು ಸಹಿತ ಉತ್ತರ ಕೇರಳದ ಮಲಬಾರಿನಲ್ಲಿ ಆರ್ಡಿನರಿ ಬಸ್ಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ.













