ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ಮಂಗಳವಾರ ರಾತ್ರಿ ಸುಳ್ಯಕ್ಕೆ ಆಗಮಿಸಿತು.ಈ ಸಂದರ್ಭದಲ್ಲಿ
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಉಪಾಧ್ಯಕ್ಷೆ ಶೊಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಅವರ ನೇತೃತ್ವದಲ್ಲಿ ಎಒಎಲ್ಇ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ಶ್ರೀರಾಮಪೇಟೆಗೆ ಆಗಮಿಸಿದ ರಥಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಡಾ.ರೇಣುಕಾಪ್ರಸಾದ್ ಅವರಿಗೆ ಅಕ್ಷಯ್ ಕೆ.ಸಿ. ಅವರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಡಾ.ಜ್ಯೋತಿ ಆರ್, ಪ್ರಸಾದ್, ಮೌರ್ಯ ಆರ್ ಕುರುಂಜಿ, ಡಾ. ಅಭಿಜ್ಞ ಮತ್ತಿತರರು ಉಪಸ್ಥಿತರಿದ್ದರು. ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ, ಪ್ರೊ.ಕೆ.ವಿ.ದಾಮೋದರ ಗೌಡ, ಚಂದ್ರಶೇಖರ ಪೇರಾಲು ಸೇರಿ ಎಒಎಲ್ಇ ಶಿಕ್ಷಣ ಸಂಸ್ಥೆಗಳ ಪ್ರಮುಖರು ಇದ್ದರು.















