ಸುಳ್ಯ: ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ನ ಸಹಯೋಗದೊಂದಿಗೆ 3ದಿನಗಳ ಕಾಲ ನಡೆದ ರಾಷ್ಟ್ರೀಯ ಮಟ್ಟದ “ಸೈನ್ಟಿಫಿಕ್ ರೈಟಿಂಗ್, ರಿಸರ್ಚ್ ಇಂಟೆಗ್ರಿಟಿ ಮತ್ತು ಪಬ್ಲಿಕೇಶನ್ ಎಥಿಕ್ಸ್”ನ
ಸ್ನಾತಕೋತ್ತರ ಪದವಿ ಮಾರ್ಗದರ್ಶಕರ ಕಾರ್ಯಾಗಾರದ ಸಮಾರೋಪಗೊಂಡಿತು. ಕಾಲೇಜಿನ ಸಭಾಂಗಣದಲ್ಲಿ
ನಡೆದ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ.ಕೆ.ವಿ.
ಚಿದಾನಂದ ಅವರು ವಹಿಸಿದ್ದರು. ಅತಿಥಿಗಳಾಗಿ ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ. ಸಿ. ರಾಮಚಂದ್ರ ಭಟ್ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ
ಉಪಾಧ್ಯಕ್ಷೆ ಶೋಭಾ ಚಿದಾನಂದ ಭಾಗವಹಿಸಿ
ಶುಭಹಾರೈಸಿದರು.
ಕಾರ್ಯಾಗಾರದ ಬಗ್ಗೆ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜ್ ಮಂಗಳೂರು ಇದರ ಪ್ರಾಂಶುಪಾಲರಾದ ಡಾ. ರವಿ ರಾವ್, ಜೆ.ಎಸ್.ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೈಸೂರಿನ ಪ್ರೊಫೆಸರ್ ಡಾ. ಸತೀಶ್ ಎಂ ಡಿ.ಯಂ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೊಪೇಸರ್ ಡಾ.ಶಿವಕುಮಾರ್,ಡಾ. ಜಯ್ವಂತ್ ವಸಂತ್
ಪ್ರೊಫೆಸರ್ ಸಾಂಗ್ಲಿ ಮಹಾರಾಷ್ಟ್ರ,ಡಾ.ಅಪೇಕ್ಷಾ ರಾವ್, ಪ್ರೊಫೆಸರ್ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡಬಿದ್ರೆ,
ಡಾ.ಮುರಳೀಧರನ್ ಎ. ಕೆ., ಪ್ರಾಂಶುಪಾಲರು
ಯಂ.ವಿ.ಆರ್ ಆಯುರ್ವೇದ ಮೆಡಿಕಲ್ ಮೆಡಿಕಲ್ ಕಾಲೇಜು, ಪರಿಶಿನಕಡವು ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿ ದ ಸ್ನಾತಕೋತ್ತರ ಪದವಿ ಮಾರ್ಗದರ್ಶಕರುಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಕಾರ್ಯಕ್ರಮದ ಅಧ್ಯಕ್ಷರು ವಿತರಿಸಿದರು. ವೇದಿಕೆಯಲ್ಲಿ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ
ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ಕವಿತಾ ಬಿ.ಯಂ.ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳ ಕಾಲೇಜಿನ 10 ಜನ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು. ಕಾರ್ಯಾಗಾರ ದಲ್ಲಿ ವಿವಿಧ ರಾಜ್ಯದ ಕಾಲೇಜುಗಳ 60ಜನ ಸ್ನಾತಕೋತ್ತರ ಪದವಿ ಮಾರ್ಗದರ್ಶಕರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಉಪಸ್ಥಿತರಿದ್ದರು.ಡಾ. ಕವಿತಾ ಬಿ. ಯಂ. ಅತಿಥಿಗಳನ್ನು ಸ್ವಾಗತಿಸಿ, ಮೂರು ದಿನದ ಕಾರ್ಯಾಗಾರದ ವರದಿ ಮಂಡಿಸಿದರು. ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ವಂದಿಸಿದರು, ಡಾ. ಅನುಷ ಎಂ. ಮತ್ತು ಡಾ. ಭಾಗ್ಯವತಿ
ಕಾರ್ಯಕ್ರಮ ನಿರೂಪಿಸಿದರು. ಚಿತ್ಕಲ ಭಾರಧ್ವಜ್ ಮತ್ತು ತಂಡ ಪ್ರಾರ್ಥಿಸಿದರು.