ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಸಾಂಸ್ಕೃತಿಕ ಸಂಘ ಉದ್ಘಾಟನೆ ಹಾಗೂ ಅರೆಭಾಷೆ ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು
ಕೆವಿಜಿ ಆಯುರ್ವೆದ ಕಾಲೇಜಿನ ಪ್ರಾಂಶುಪಾಲ ಡಾ. ಡಾಲೀಲಾಧರ ಡಿ.ವಿ. ಉದ್ಘಾಟಿಸಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ಅರೆಭಾಷೆ ಸಾಹಿತಿ ಯೋಗೀಶ ಹೊಸೊಳಿಕೆ ಅರೆಭಾಷೆ ಬೆಳೆದು ಬಂದ ದಾರಿ ಮತ್ತು ಅರೆಭಾಷೆ ಇತಿಹಾಸ,ಲೇಖಕರು,ಕವನಗಳು ಮುಂತಾದ ವಿಷಯದ ಕುರಿತು ಉಪನ್ಯಾಸ ನೀಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ ಆರ್, ಅರೆಭಾಷೆ ಅಕಾಡೆಮಿ ಸದಸ್ಯರಾದ ತೇಜಕುಮಾರ್ ಕುಡೆಕಲ್ಲು ಉಪಸ್ಥಿತರಿದ್ದರು.

ಅಕಾಡೆಮಿ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಅರೆಭಾಷೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ವಿದ್ಯಾರ್ಥಿನಿ ವಷಿಕಾ ಉಳುವಾರು ಸ್ವಾಗತಿಸಿ, ಅರೆಭಾಷೆ ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು ಪ್ರಾಸ್ತವಿಕವಾಗಿ ಮಾತನಾಡಿದರು. ಆಶಿತಾ ಮಲ್ಲಾರ ವಂದಿಸಿದರು. ಯಕ್ಷಿತಾ ಲೆಕ್ಕೆಶ್ರೀಮೂಲೆ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನಲ್ಲಿ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಿತೇಶ್ ಕುದ್ಕುಳಿ,ಉಪದ್ಯಾಕ್ಷರಾಗಿ ಮಾನಸ ಎಂ. ಕಾರ್ಯದರ್ಶಿಯಾಗಿ ಯುವರಾಜ ಬಾಳೆಗುಡ್ಡೆ,ಜೊತೆ ಕಾರ್ಯದರ್ಶಿಯಾಗಿ ಜಯದೇವ,ಪ್ರಿಯ ಕೆ,ಖಜಾಂಜಿಯಾಗಿ ತರುಣ್,
ಸದಸ್ಯರಾಗಿ ನವ್ಯಶೀ,ತಶ್ವಿ,ವೀಣಾ,ದಿವ್ಯ ಜ್ಯೋತಿ,ಯಕ್ಷಿತಾ ಲೆಕ್ಕೆಶ್ರೀಮೂಲೆ,
ತನುಷಾ ಕೆ.ಜೆ,ಆಶಿತಾ ಮಲ್ಲಾರ, ಪ್ರಜ್ಞಾ,ರಕ್ಷಿತಾ,ಕೃಪಾಶ್ರೀ,ಅಮೂಲ್ಯ ಎ ಕೆ
ಭುವಿತ,ಶ್ರೇಯ,ಚೈತ್ರ,ಮನ್ವಿತ್, ಬ್ರಿಜೇಶ್, ವಷಿಕಾ,ಕೃತಿಕ್
ಗೌತಮ್ ,ದಕ್ಷತ್,ಲಿಖಿತ್ ಆಯ್ಕೆಯಾದರು.