ಸುಳ್ಯ: ಪದವಿಪೂರ್ವ ಕಾಲೇಜು ವಿಭಾಗದ ಪದವಿ ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಗಡಿ ಪ್ರದೇಶವಾದ ಕಲ್ಲಪಳ್ಳಿಯ ಕಲ್ಲಪಳ್ಳಿಯ ಅನುಷಾ ಭಾಸ್ಕರ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜಿನ ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದ ಹಾಮ್ಮರ್ ತ್ರೋ ಸ್ಪರ್ಧೆಯಲ್ಲಿ

ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳಿಸಿದ ಅನುಷಾ ಭಾಸ್ಕರ 39.20 ಮೀಟರ್ ದೂರ ಎಸೆದು ಪ್ರಥಮ ಸ್ಥಾನಿಯಾಗಿದ್ದಾರೆ. ಆ ಮೂಲಕ ಧಾರವಾಡದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಉಜಿರೆ ಎಸ್ ಡಿ ಎಂ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ ಅನುಷಾ ಕಲ್ಲಪಳ್ಳಿ ಬಾಟೋಳಿಯ ಭಾಸ್ಕರ ಮತ್ತು ಪುಷ್ಪ ದಂಪತಿಗಳ ಪುತ್ರಿ. ಪ್ರೌಢ ಶಾಲಾ ವಿಭಾಗದಲ್ಲಿ ಆಲೆಟ್ಟಿ ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿಯಾಗಿದ್ದ ಸಂದರ್ಭದಲ್ಲಿ ಅನುಷಾ ಹ್ಯಾಮರ್ ತ್ರೋ ಎಸೆತಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.
















