ಸುಳ್ಯ: ದೇಶದ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಎಲ್ಲರು ಕೈ ಜೋಡಿಸಬೇಕು. ಜಾಗೃತರಾಗಿ ಮತ ಚಲಾಯಿಸಬೇಕು ಎಂದು ಅಮರ ಸುಳ್ಯ ನಾಗರಿಕ ವೇದಿಕೆ ಮನವಿ ಮಾಡಿದೆ. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮರ ಸುಳ್ಯ ನಾಗರಿಕ ವೇದಿಕೆಯ ಸಂಚಾಲಕ ಗೋಪಾಲ ಪೆರಾಜೆ ‘ಸಂವಿಧಾನ ಬದಲಾವಣೆ
ಮಾಡುವುದು, ಸಂವಿಧಾನ ಬದಲಾವಣೆಯ ಮಾತುಗಳು ಆಗಾಗ ಕೇಳಿ ಬರುತಿದೆ. ಜಗತ್ತಿನ ಸರ್ವಶ್ರೇಷ್ಟ ಸಂವಿಧಾನಗಳಲ್ಲೊಂದಾದ ಭಾರತೀಯ ಸಂವಿಧಾನದ ಬದಲಾವಣೆಯ ಚಿಂತನೆ, ಮಾತುಗಳು ದೇಶಕ್ಕೆ ಮಾರಕ
ದ್ವೇಷದ ರಾಜಕಾರಣ ಮಾಡುವುದು, ಭ್ರಷ್ಟಾಚಾರ, ಚುನಾವಣಾ ಬಾಂಡ್ಗಳು ಸೇರಿದ ವಿಚಾರದ ಬಗ್ಗೆಗಿನ ನಿಲುವುಗಳು ಸೇರಿ ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶಗಳು ಹಾಗೂ ಎಲ್ಲಾ ವಿಷಯಗಳನ್ನು ಮತದಾರರು ಮತದಾನ ಮಾಡುವ ಮುಂಚಿತವಾಗಿ ಆಲೋಚನೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭರತ್ ಕುಕ್ಕುಜಡ್ಕ, ಪ್ರಮೀಳಾ ಪೆಲ್ತಡ್ಕ,ಭಾರತಿ ಚೆಂಬು, ದಿವಾಕರ ಪೈ ಮಜಿಗುಂಡಿ, ಕರುಣಾಕರ ಪಲ್ಲತಡ್ಕಇದ್ದರು.