ಲಖನೌ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಅಫ್ಗಾನಿಸ್ತಾನ ತಂಡ 7 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿದೆ.
ಅಫ್ಗನ್ ತಂಡವು ಆಡಿರುವ 7 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಇದರಿಂದಾಗಿ ಐದನೇ ಸ್ಥಾನ ದಲ್ಲಿದೆ. ಸೆಮಿಫೈನಲ್ಗೆ ಪ್ರವೇಶಿಸುವ
ಆಸೆಯನ್ನು ಜೀವಂತಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 46.3 ಓವರ್ಗಳಲ್ಲಿ 179 ರನ್ ಗಳಿಸಿ ಆಲೌಟ್ ಆಗಿದೆ. ಸೈಬ್ರಾಂಡ್ ಇಂಗೆಲ್ಬ್ರೆಕ್ಟ್ 58, ಮ್ಯಾಕ್ಸ್ ಒ ಡೌಡ್ 42, ಕಾಲಿನ್ ಆ್ಯಕರ್ಮನ್ 29 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
180 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಅಫ್ಗನ್ 31.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ನಾಯಕ ಹಷ್ಮತ್ಉಲ್ಲಾ ಶಾಹಿದಿ 56, ರಹಮತ್ ಶಾ 52 ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರೆ, ಅಜ್ಮತ್ಉಲ್ಲಾ ಒಮ್ರಾಝೈ 31, ಇಬ್ರಾಹಿಂ ಜದ್ರಾನ್ 20 ರನ್ ಗಳಿಸಿದರು.ನೆದರ್ಲೆಂಡ್ಸ್ ಪರ ಲೋಗನ್ ವ್ಯಾನ್ ಬೀಕ್, ರಾಲೋಫ್ ವ್ಯಾನ್ ಡರ್, ಸಕಿಬ್ ಜುಲ್ಫಿಕರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಎದುರು ಜಯಿಸಿರುವ ನೆದರ್ಲೆಂಡ್ಸ್ ತಂಡವು ಎಂಟನೇ ಸ್ಥಾನದಲ್ಲಿದೆ.











