ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆಮ ಅವರಿಗೆ 85 ವರ್ಷ ವಯಸ್ಸಾಗಿತ್ತು. ಕೆಲ ಸಮದಿಂದ ಅನಾರೋಗ್ಯದಿಂದ ಇದ್ದ ಅವರು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು. ಕನ್ನಡ, ತಮಿಳು, ತೆಲುಗು ಸೇರಿ ನೂರಾರು ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ
400, ತಮಿಳು, ತೆಲುಗಿನಲ್ಲಿ 200 ಚಿತ್ರಗಳು ಸೇರಿದಂತೆ ಲೀಲಾವತಿ ಅವರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ದ.ಕ.ಜಿಲ್ಲಡಯ ಬೆಳ್ತಂಗಡಿ ಮೂಲದವರಾದ ಲೀಲಾವತಿ ಅವರ ಮೊದಲ ಚಿತ್ತ 1958 ರಲ್ಲಿ ತೆರೆಕಂಡಿದ್ದ ಭಕ್ತ ಪ್ರಲ್ಹಾದ. 2009ರಲ್ಲಿ ಬಿಡುಗಡೆಯಾಗಿದ್ದ ‘ಯಾರದು’ ಅವರ ಕೊನೆಯ ಚಿತ್ರ. ಲೀಲಾವತಿ ಅವರು ನಟನೆ ಅಷ್ಟೇ ಅಲ್ಲದೇ ಕನ್ನಡದ ಕೆಲ ಚಿತ್ರಗಳನ್ನೂ ನಿರ್ಮಿಸಿದ್ದರು. ಲೀಲಾವತಿ ಅವರು ಪುತ್ರ, ನಟ ವಿನೋದ್ ರಾಜ್ ಅವರನ್ನು ಅಗಲಿದ್ದಾರೆ. ಡಾ. ರಾಜಕುಮಾರ್, ವಿಷ್ಣುವರ್ಧನ್ ಸೇರಿದಂತೆ ದಕ್ಷಿಣ ಭಾರತದ ದಿಗ್ಗಜ ನಟರ ಜೊತೆ ಲೀಲಾವತಿ ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು.














