ಸುಳ್ಯ:ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಟಿ ತಿಂಗಳ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ‘ಆಟಿ ಉತ್ಸವ–2026’ ಸಂಭ್ರಮದಿಂದ ಆಚರಿಸಲಾಯಿತು. ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲ ಅನೀಶ್ ನಾದ್ ಇ.ಎಂ ಮುಖ್ಯ ಅತಿಥಿಯಾಗಿದ್ದರು.ಕಾಲೇಜಿನ
ಪ್ರಾಂಶುಪಾಲೆ ಡಾ.ಯಶೋಧಾ ರಾಮಚಂದ್ರ ಮಾತನಾಡಿದರು.
ಆಟಿ ಉತ್ಸವ ಸ್ಪರ್ಧೆಗಳ ತೀರ್ಪುಗಾರರಾಗಿ ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ, ಇನ್ನರ್ ವೀಲ್ ಕ್ಲಬ್ ಸದಸ್ಯೆ ಚಿಂತನಾ ಸುಬ್ರಹ್ಮಣ್ಯ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂಧನ್, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯದ ಚಿತ್ರಕಲಾ ಶಿಕ್ಷಕ ಮೆಲ್ವಿನ್, ರಂಗಭೂಮಿ ಕಲಾವಿದ ರಾಜ್ ಮುಖೇಶ್, ನೃತ್ಯ ಕಲಾವಿದೆ ಲಿಖಿತಾ ಭಾಗವಹಿಸಿದ್ದರು.

ಕಾಲೇಜಿನ ಉಪಪ್ರಾಂಶುಪಾಲ ದೀಪಕ್ ವೈ.ಆರ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಭವ್ಯ ಸಿ.ಟಿ ಸ್ವಾಗತಿಸಿ, ಆಂಗ್ಲ ಭಾಷಾ ಉಪನ್ಯಾಸಕಿ ಮಲ್ಲಿಕಾ ಎಂ.ಎಲ್. ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಕಲ್ಲಾಟ, ಚೆನ್ನಮಣೆ, ಫೇಸ್ ಪೇಂಟಿಂಗ್, ಹ್ಯಾಂಗಿಂಗ್ ಡೆಕೊರೇಶನ್, ಆಟಿ ಆಹಾರಗಳ ಪ್ರದರ್ಶನ, ಜನಪದ ಗೀತೆ ಹಾಗೂ ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.








