ಸುಳ್ಯ: ತುಳು ನಾಡು ಎಂದರೆ ಆಚರಣೆ, ಸಂಪ್ರದಾಯಗಳ ಆಗರ. ಅದರಲ್ಲಿಯೂ ಆಟಿ ತಿಂಗಳು ಅಂದರೆ ಅದು ಬಲು ವಿಶಿಷ್ಠ ಆಚರಣೆಗಳು ಗಳು ಮತ್ತು ಆಹಾರಗಳ ಮಹಾ ಮೇಳ. ಆಟಿ ತಿಂಗಳ ತುಳು ನಾಡಿನ ಕಟ್ಟು ಕಟ್ಟಳೆ, ಪರಂಪರೆ ಮತ್ತು ತಿನಿಸುಗಳ ಸಂಭ್ರಮ ಗುರುವಾರ ತಾಲೂಕು ಪಂಚಾಯತ್ನಲ್ಲಿ ಮೇಳೈಸಿತ್ತು.ಸುಳ್ಯ ತಾಲೂಕು ಪಂಚಾಯತ್ ಸುಳ್ಯ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ ಮತ್ತು
ಜೀವನೋಪಾಯ ಇಲಾಖೆ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಸುಳ್ಯ ಇದರ ಸಹಯೋಗದಲ್ಲಿ ನಡೆದ ‘ಆಟಿ ಗಮ್ಮತ್ತು’ ತುಳುನಾಡಿನ ತಿನಿಸುಗಳ ರುಚಿಯ ವೈವಿಧ್ಯತೆಯನ್ನು ಸಾರಿತು. ತಾಲೂಕಿನ ವಿವಿಧ ಗ್ರಾಮಗಳ ಸಂಜೀವಿನಿ ಒಕ್ಕೂಟಗಳು ವೈವಿಧ್ಯಮಯ ತಿಂಡಿ ತಿನಿಸುಗಳನ್ನು ತಯಾರಿಸಿ ಉಣ ಬಡಿಸಿದರು.ತಿಂಡಿ ತಿನಿಸುಗಳ ಜೊತೆಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ಸೆಳೆದವು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಉದ್ಘಾಟಿಸಿದರು.ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು. ವಿಮಲಾರುಣ ಪಡ್ಡಂಬೈಲು ಆಟಿ ಆಚರಣೆ ಕುರಿತು
ಮಾತನಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ,ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಗ್ಯಾರಂಟಿ ಸಮಿತಿ ತಾಲೂಕುಗಳ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಪತ್ರಕರ್ತ ಡಾ.ಯು.ಪಿ.ಶಿವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೀಣಾ.ಎಂ.ಟಿ, ವಿಬಿಜಿರಾಮ್ಜಿ ಯೋಜನೆಯ ನಿರ್ದೇಶಕ ರವಿಚಂದ್ರ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ದಿವ್ಯ ಸೃಜನ್, ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕ ಮಹೇಶ್.ಬಿ ಸ್ವಾಗತಿಸಿ,ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮಾಧಿಕಾರಿ ಶ್ವೇತಾ ವಂದಿಸಿದರು.ದೇವರಾಜ್ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು.
ರುಚಿಯ ವೈವಿಧ್ಯತೆ:
ಆಟಿ ಗಮ್ಮತ್ತು ಕಾರ್ಯಕ್ರಮದಲ್ಲಿ ಒಂದೊಂದು ಒಕ್ಕೂಟವೂ ವೈವಿಧ್ಯಮಯ ತಿಂಡಿ, ತಿನಿಸುಗಳನ್ನು ಉಣ ಬಡಿಸಿದರು.ಗಾಂಧಾರಿ ಮೆಣಸಿನ ಸೊಪ್ಪು ಪಲ್ಯ, ಕಣಿಲೆ ಸಾಂಬಾರು ,ಆಟಿ ಸೊಪ್ಪಿನ ಹಲ್ವಾ, ನುಗ್ಗೆ ಸೊಪ್ಪು ಪಲ್ಯ , ಕೆಸುವಿನ ಸಾಂಬಾರು, ನೀರ್ ದೋಸೆ ನಾಟಿ ಕೋಳಿ ಸಾರು, ಏಡಿ ಸುಕ್ಕ , ಚಿಕನ್ ಸುಕ್ಕ , ಇಟ್ಟಿ ಚಟ್ನಿ , ಕೆಸುವಿನ ಬೇರು ಮತ್ತು ಹಲಸಿನ ಬೀಜ ಸಾಂಬಾರು , ಈರುಳ್ಳಿ ದೂಸೆ,ಮಾವಿನ ಹಣ್ಣಿನ ಕ್ಷೀರ, ಸಿಹಿ ಪತ್ರೋಡೆ , ಮರುವಾಯಿ ಪುಂಡಿ, ಅಪ್ಪದ ಹಿಟ್ಟು, ಅರಶಿನ ಎಲೆ ಹಿಟ್ಟು,ಹಲಸಿನ ಉಪ್ಪಿನ ಸೋಳೆ, ಕೆಸುವಿನ ಪತ್ರೋಡೆ,ಅಣಬೆ ಚಿಲ್ಲಿ,ಮೆಂತೆ

ಮಣ್ಣಿ ,ಆಟಿ ಪಾಯಸ, ಸೊಪ್ಪಿನ ವಡೆ, ಇಡ್ಲಿ ,ಮದ್ದಿನ ಸೊಪ್ಪಿನ ಪಲ್ಯ, ಸುರಳಿ ಅಣಬೆ ಸುಕ್ಕ,ಸಜಂಕ್ ಪತ್ರೋಡೆ , ಕಾಳು ಮೆಣಸು ಕಷಾಯ, ಹಲಸು ಹಾಗೂ ಹಲಸಿನ ಬೀಜ ಪಲ್ಯ ,ಏಡಿ ಗಸಿ, ಹಲಸಿನ ಉಂಡ್ಲುಗ , ಕ್ಯಾರೆಟ್ ಹಲ್ವ, ತಿಮರೆ ಚಟ್ನಿ , ಮುಳ್ಳು ಸೌತೆ ಕಡುಬು, ಚಿಕನ್ ಪುಳಿಮುಂಚಿ,ನುಗ್ಗೆ ಸೊಪ್ಪಿನ ಪತ್ರೋಡೆ,ಕಣಿಲೆ ಪಲ್ಯ, ಅಂಬಡೆ ಸಾರು,ತಿಮರೆ ಮತ್ತು ಪೇರಳೆ ಚಿಗುರು ಚಟ್ನಿ, ಪೇರ್ ಪುಂಡಿ , ಕೆಸುವಿನ ಚಟ್ನಿ , ಮಿಕ್ಸ್ ಸೊಪ್ಪಿನ ಪಲ್ಯ, ಅಣಬೆ ಪುಳಿಮುಂಚಿ , ಮೆಂತೆ ಮುದ್ದೆ , ಮಾಂಬಳ ಚಟ್ನಿ,ಪೋಂಬೆ ಪಲ್ಯ, ಹುಳಿ ಗೊಜ್ಜು,ಕೋಳಿ ಜುಟ್ಟು ಹಣ್ಣು,ತಜಂಕ್ ಸೊಪ್ಪಿನ ವಡೆ,ಪಾಲಕ್ ದೋಸೆ, ಬಾಳೆ ದಿಂಡು ಪಲ್ಯ, ಮೆಂತೆ ಹಿಟ್ಟು,ಮಾವಿನ ಕಾಯಿ ಚಟ್ನಿ, ಹುರುಳಿ ಮತ್ತು ಬಾಳೆ ಹೂವಿನ ಪಲ್ಯ, ಮಾವಿನ ಹಣ್ಣಿನ ಮಾಂಬಳ,ಮಿಡಿ ಉಪ್ಪಿನಕಾಯಿ, ಕೆಸು ದಂಡಿನ ಪಲ್ಯ,ನುಗ್ಗೆ, ಅಲಸಂಡೆ ಸೊಪ್ಲು ಪಲ್ಯ, ಬಾಳೆಕಾಯಿ ಚಿಪ್ಸ್, ಹೆಸರು ಮತ್ತು ಪೋಂಬೆ ಪಲ್ಯ, ಕೊಬ್ಬರಿ ಚಟ್ನಿ ಹೀಗೆ ವೈವಿಧ್ಯಮಯ ತಿಂಡಿ ತಿನಿಸುಗಳು ಜನರ ನಾಲಗೆಗೆ ರುಚಿಯ ವೈವಿಧ್ಯತೆಯನ್ನು ಸಾರಿತು.





































