ಸುಳ್ಯ:ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ
ಎ.ಕೆ.ಇಬ್ರಾಹಿಂ ಸಂಪಾಜೆ ರಾಜಿನಾಮೆ ನೀಡಿದ್ದಾರೆ. ರಾಜಿನಾಮೆ ಪತ್ರವನ್ನು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್.ಕೆ.ಕೆ ಅವರಿಗೆ
ಸಲ್ಲಿಸಲಾಗಿದೆ ಎಂದು ಇಬ್ರಾಹಿಂ ಅವರು ತಿಳಿಸಿದ್ದಾರೆ.ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ಕಾರಣಕ್ಕೆ ಬೇಸತ್ತು ರಾಜಿನಾಮೆ ಸಲ್ಲಿಸುತ್ತಿದ್ದೇನೆ.ಕರಾವಳಿಯ ಕೋಮು ಸೌಹಾರ್ಧತೆಗಾಗಿ
ಸರಕಾರ ಹಾಕಿಕೊಂಡ ಕಾರ್ಯಯೋಜನೆ ಯಾವುದೂ ಕಾರ್ಯಗತವಾಗಿಲ್ಲ. ಅಮಾಯಕರ ಜೀವ ಹರಣ ನಡೆಯುತ್ತಿದೆ.ದ.ಕ ಜಿಲ್ಲೆಯಲ್ಲಿ ನಮ್ಮ ಸರಕಾರ ಇರುವಾಗಲೇ ಈ ರೀತಿಯ ಹತ್ಯೆಗಳು ನಡೆಯುತಗತಿರುವುದು ಮೇಲ್ನೋಟಕ್ಕೆ ಸರಕಾರದ ವೈಫಲ್ಯ ಎಂದೇ ಸ್ಪಷ್ಟವಾಗುತ್ತಿದೆ. ಈ ಕಾರಣದಿಂದ ಜನಸಾಮಾನ್ಯರ ಪ್ರಶ್ನೆಗೆ ಉತ್ತರಿಸಲೂ ಕಷ್ಟವಾಗುತ್ತಿದ್ದು, ನಮ್ಮ ಭಾವನೆಗಳಿಗೆ ಈ ಸರಕಾರ ಸ್ಪಂಧಿಸುತ್ತಿಲ್ಲ ಎನ್ನುವ ಕಾರಣಕ್ಕೆ ಬೇಸತ್ತು ದ.ಕ.ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.