ದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ನ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಎರಡು ವಿಕೆಟ್ ನಷ್ಟಕ್ಕೆ 318 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತದ ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ಬ್ಯಾಟರ್ಗಳು
ರನ್ ಹೊಳೆ ಹರಿಸಿದರು. ಯಶಸ್ವಿ ಜೈಸ್ವಾಲ್ (173), ಸಾಯಿ ಸುದರ್ಶನ್ (87), ಕೆ.ಎಲ್ ರಾಹುಲ್ (38) ಹಾಗೂ ನಾಯಕ ಶುಭಮನ್ ಗಿಲ್ (20) ರನ್ ಗಳಿಸಿದರು.
ವಿಂಡೀಸ್ ಪರ ಜೋಮೆಲ್ ವಾರಿಕನ್ ಮಾತ್ರ 2 ವಿಕೆಟ್ ಪಡೆದುಕೊಂಡರು. ಇನ್ನೂ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 7ನೇ ಶತಕ ದಾಖಲಿಸಿ ಅಜೇಯರಾಗಿ ಉಳಿದಿದ್ದಾರೆ. ಇವರ ಜೊತೆಗೆ ನಾಯಕ ಶುಭಮನ್ ಗಿಲ್ ಕೂಡ 20 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 253 ಎಸೆತಗಳಲ್ಲಿ 22 ಬೌಂಡರಿ ಸಹೀತ ಜೈಸ್ವಾಲ್ ಅಜೇಯ 173 ರನ್ ಗಳಿಸಿದರು. ಸಾಯ್ ಸುದರ್ಶನ್ 165 ಎಸೆತಗಳಲ್ಲಿ 12 ಬೌಂಡರಿ ಸಹಿತ 87 ರನ್ ಬಾರಿಸಿದರು.















