ಅಡಿಲೇಡ್:ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 2 ವಿಕೆಟ್ ಗೆಲುವು ದಾಖಲಿಸಿದ್ದು 3 ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ. ಭಾರತ ನೀಡಿದ್ದ 265 ರನ್ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯ ತಂಡ 8 ವಿಕೆಟ್ ಕಳೆದುಕೊಂಡು 46.2 ಓವರ್ಗಳಲ್ಲಿ ಗುರಿ ತಲುಪಿತು.ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತವು
9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು. ಆಸೀಸ್ ಪರ ಮಾಟ್ ಶಾರ್ಟ್ 74, ಕೂಪರ್ ಕೊಣಾಲಿ 61, ಮಿಚ್ಚೆಲ್ ಓವನ್ 36 ರನ್ ಬಾರಿಸಿದರು.ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ನಾಯಕ ಶುಭಮನ್ ಗಿಲ್ (9) ಹಾಗೂ ವಿರಾಟ್ ಕೊಹ್ಲಿ (0) ಒಂದೇ ಓವರ್ನಲ್ಲಿ ಔಟಾಗುವುದೊಂದಿಗೆ ಆರಂಭಿಕ ಆಘಾತ ಎದುರಾಯಿತು.ಈ ಹೊತ್ತಿನಲ್ಲಿ ಜೊತೆಯಾದ ರೋಹಿತ್ ಮತ್ತು ಶ್ರೇಯಸ್, ಇನಿಂಗ್ಸ್ಗೆ ಬಲತುಂಬಿದರು.ಈ ಜೋಡಿ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 118 ರನ್ ಕಲೆಹಾಕಿತು.97 ಎಸೆತಗಳನ್ನು ಎದುರಿಸಿದ ರೋಹಿತ್, 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 73 ರನ್ ಗಳಿಸಿ ಔಟಾದರೆ, ಅಯ್ಯರ್ ಆಟ 61 ರನ್ಗೆ ಕೊನೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ 44 ರನ್ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಹರ್ಷಿತ್ ರಾಣ (24) ಅವರೂ ಉಪಯುಕ್ತ ಆಟವಾಡಿದರು. ಹೀಗಾಗಿ, ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 264 ರನ್ ಕಲೆಹಾಕಲು ಸಾಧ್ಯವಾಯಿತು.
ಆಸಿಸ್ ಪರ ಸ್ಪಿನ್ನರ್ ಆ್ಯಡಂ ಜಂಪಾ ನಾಲ್ಕು ವಿಕೆಟ್ ಪಡೆದರೆ, ಷೇವಿಯರ್ ಬರ್ಟ್ಲೆಟ್ ಎರಡು ವಿಕೆಟ್ ಉರುಳಿಸಿದರು. ಮಿಚೇಲ್ ಸ್ಟಾರ್ಕ್ ಎರಡು ವಿಕೆಟ್ ಕಿತ್ತರು.















