ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಮೂರನೇ ಆವೃತ್ತಿಯ ಫೈನಲ್ ಕ್ರಿಕೆಟ್ನ ತವರು ಲಾರ್ಡ್ಸ್ನಲ್ಲಿ ಬುಧವಾರ ಆರಂಭವಾಗಲಿದೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.ಈ ಹಿಂದಿನ– 2023ರ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡ 209 ರನ್ಗಳಿಂದ ಭಾರತ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಗಾಯಾಳಾಗಿದ್ದ ಅಸೀಸ್ನ ಜೋಶ್ ಹ್ಯಾಜಲ್ವುಡ್ ಚೇತರಿಸಿಕೊಂಡಿದ್ದು, ಅವರು
ಸ್ಕಾಟ್ ಬೋಲ್ಯಾಂಡ್ ಬದಲು ಸ್ಥಾನ ಪಡೆದಿದ್ದಾರೆ. ಲಾಬುಶೇನ್ ಅವರು ಉಸ್ಮಾನ್ ಖ್ವಾಜಾ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾ ಪರ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ನಾಲ್ವರು ಈ ತಂಡದಲ್ಲಿದ್ದಾರೆ. ನೇಥನ್ ಲಯನ್ (553), ಮಿಚೆಲ್ ಸ್ಟಾರ್ಕ್ (382), ಪ್ಯಾಟ್ ಕಮಿನ್ಸ್ (294), ಹೇಜಲ್ವುಡ್ (279) ಈ ನಾಲ್ವರು. ಸ್ಟೀವ್ ಸ್ಮಿತ್ ತಮ್ಮ ಕೊನೆಯ ಐದು ಟೆಸ್ಟ್ಗಳಲ್ಲಿ ನಾಲ್ಕು ಶತಕ ಬಾರಿಸಿ ಒಳ್ಳೆಯ ಲಯದಲ್ಲಿದ್ದಾರೆ. ಟೆಸ್ಟ್ನಲ್ಲಿ 10 ಸಹಸ್ರ ರನ್ಗಳ ಮೈಲಿಗಲ್ಲು ದಾಟಿದ್ದಾರೆ. ಲಾರ್ಡ್ಸ್ನಲ್ಲಿ ಅವರು 58ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಕಾಗಿಸೋ ರಬಡಾ,ಮಾರ್ಕೊ ಯಾನ್ಸೆನ್, ಲುಂಗಿ ಗಿಡಿ ಅವರ ಬೌಲಿಂಗ್ ಮೇಲೆ ಆಫ್ರಿಕಾ ನೆಚ್ಚಿದೆ. ಏಡನ್ ಮರ್ಕರಂ ಹಾಗೂ ರಿಯಾನ್ ರಿಕೆಲ್ಟನ್ ಅವರು ದಕ್ಷಿಣ ಆಫ್ರಿಕಾದ ಇನಿಂಗ್ಸ್ ಆರಂಭಿಸಲಿದ್ದಾರೆ. ನಾಯಕ ಬವುಮಾ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ತಂಡಗಳು: ಆಸ್ಟ್ರೇಲಿಯಾ: ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಕ್ಯಾಮರೂನ್ ಗ್ರೀನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್ಸ್ಟರ್ ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಶ್ ಹ್ಯಾಜಲ್ವುಡ್.
ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ತೆಂಬಾ ಬವುಮಾ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಬೆಡಿಂಗಮ್, ಕೈಲ್ ವೆರಿಯನ್, ಮಾರ್ಕೊ ಯಾನ್ಸನ್, ಕೇಶವ ಮಹಾರಾಜ್, ಕಗಿಸೊ ರಬಾಡ, ಲುಂಗಿ ಗಿಡಿ.
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಜಿಯೊ ಹಾಟ್ಸ್ಟಾರ್.