ನ್ಯೂಯಾರ್ಕ್: 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಗೆದ್ದ ತಂಡಕ್ಕೆ ದೊರೆಯುವ ಬಹುಮಾನದ ಮೊತ್ತ ಕೇಳಿದರೆ ಅಚ್ಚರಿ ಹುಟ್ಟಿಸಬಹುದು. ಚಾಂಪಿಯನ್ ತಂಡ ವಿಶ್ವಕಪ್ ಜೊತೆಗೆ ಬರೋಬ್ಬರಿ 452 ಕೋಟಿ ರೂ.(50 ಮಿಲಿಯನ್ ಯುಎಸ್ ಡಾಲರ್) ನಗದು ಬಹುಮಾನ ಸಿಗಲಿದೆ.
ರನ್ನರ್-ಅಪ್ ತಂಡಕ್ಕೆ ಅಂದಾಜು
298 ಕೋಟಿ ರೂ. (33 ಮಿಲಿಯನ್) ಮೂರನೇ ಸ್ಥಾನ ಪಡೆದ ತಂಡಕ್ಕೆ ರೂ.262 ಕೋಟಿ(29 ಮಿಲಿಯನ್)ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ರುಊ.244 ಕೋಟಿ (27 ಮಿಲಿಯನ್)ಬಹುಮಾನ ದೊರೆಯಲಿದೆ.
ಟೂರ್ನಮೆಂಟ್ನ ಇತರೆ ಹಂತಗಳಲ್ಲಿ ನಿರ್ಗಮಿಸುವ ತಂಡಗಳು ಸಹ ಕೋಟಿಗಟ್ಟಲೆ ಮೊತ್ತವನ್ನು ಪಡೆಯುತ್ತವೆ. ಉದಾಹರಣೆಗೆ, ಕ್ವಾರ್ಟರ್-ಫೈನಲ್ ತಲುಪುವ ತಂಡಗಳಿಗೆ ತಲಾ 171 ಕೋಟಿ (19 ಮಿಲಿಯನ್) ಹಾಗೂ ಲೀಗ್ ಹಂತದಲ್ಲಿ ಹೊರಬೀಳುವ ತಂಡಗಳಿಗೆ 81 ಕೋಟಿ (9 ಮಿಲಿಯನ್) ದಿಂದ 99 ಕೋಟಿ (11 ಮಿಲಿಯನ್) ವರೆಗೆ ಬಹುಮಾನ ಲಭ್ಯವಾಗಲಿದೆ.ಕಳೆದ ಬಾರಿ ವಿಶ್ವಕಪ್ ಗೆದ್ದಾಗ ಅರ್ಜೆಂಟೀನಾ ತಂಡಕ್ಕೆ
347 ಕೋಟಿ ಲಭಿಸಿತ್ತು. ಅದಕ್ಕಿಂತ 100 ಕೋಟಿಗೂ ಹೆಚ್ಚು ಮೊತ್ತ ಈ ವರ್ಷ ವಿಶ್ವಕಪ್ ಗೆದ್ದ ತಂಡಕ್ಕೆ ಸಿಗಲಿದೆ. ಅಂದರೆ ಒಟ್ಟಾರೆ ಒಟ್ಟು ಮೊತ್ತ 5925 ಕೋಟಿಯ ನಗದು ಬಹುಮಾನ ದೊರೆಯಲಿದೆ.








