ಸಂಪಾಜೆ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಕಾಡಾನೆಯೊಂದು ನಡು ರಸ್ತೆಯಲ್ಲಿ ಪ್ರತ್ಯಕ್ಷಗೊಂಡು ಭೀತಿ ಹುಟ್ಟಿಸಿದೆ. ರಸ್ತೆಯಲ್ಲಿಯೇ ಕೆಲ ಹೊತ್ತು ಸುತ್ತು ಬಂದ ಕಾಡಾನೆಯನ್ನು ನೊಡಿ ಹೆದ್ದಾರಿಯ ವಾಹನಗಳು ಎರಡೂ ಬದಿಯಲ್ಲಿ ನಿಲ್ಲಿಸಿದವು. ವಾಹನಗಳ ಶಬ್ದ ಮತ್ತು ಬೆಳಕು ನೋಡಿ ಕೆಲ ಹೊತ್ತು
ರಸ್ತೆಯಲ್ಲಿ ಸುತ್ತು ಹಾಕಿ ರಸ್ತೆ ಬದಿಗೆ ಸರಿಯಿತು. ಸಂಜೆಯಿಂದಲೇ ಗ್ರಾಮದ ವಿವಿಧ ಕಡೆಗಳಲ್ಲಿ ಕಂಡು ಬಂದ ಆನೆ ಭೀತಿ ಹುಟ್ಟಿಸಿತ್ತು. ಕಳೆದ ವಾರವೂ ಕಾಡಾನೆ ಮುಖ್ಯ ರಸ್ತೆಯಲ್ಲಿ ಸಾಗಿ ತೋಟಕ್ಕೆ ನುಗ್ಗಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಕಾಡಾನೆ ಮುಖ್ಯರಸ್ತೆಯಾಗಿ ಸಂಚರಿಸಿ ದ.ಕ. ಸಂಪಾಜೆ ಗ್ರಾಮದ ವಿವಿಧೆಡೆ ಕೃಷಿ ನಾಶಪಡಿಸಿತ್ತು. ಸಂಪಾಜೆ ಗ್ರಾಮದ ವಿವಿಧ ಕಡೆಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಂಡು ಬಂದು ಭೀತಿ ಹುಟ್ಟಿಸುತಿದೆ.