ದುಗ್ಗಲಡ್ಕ:ದುಗ್ಗಲಡ್ಕದಲ್ಲಿ ಸಮಸ್ತ ಮತ ವಿದ್ಯಾಭ್ಯಾಸ ಬೋರ್ಡ್ ನೋಂದಾಯಿತ, ಕಾರ್ಯಚರಿಸುತ್ತಿರುವ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಐಡಿ ಕಾರ್ಡ್ ವಿತರಿಸಿದರು. ದಾನಿಗಳಾದ
ಉದ್ಯಮಿ ಸುಲೈಮಾನ್ ಡಿ ಎಮ್, ಮಹಲ್ಲ್ ಸಮಿತಿ ಸದಸ್ಯರು, ಮದರಸ ಸದರ್ ಮುಹಲ್ಲಿಮ್ ಅಬ್ದುಲ್ ನಾಸಿರ್ ಮೌಲವಿ, ಸಹ ಅಧ್ಯಾಪಕರಾದ ಮಿರ್ಷಾದ್ ಉಸ್ತಾದ್, ಕಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಇದರ ಪದಾಧಿಕಾರಿಗಳು ಹಾಗೂ ಮದರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಮದರಸ ಸದರ್ ಮುಹಲ್ಲಿಮ್ ಅಬ್ದುಲ್ ನಾಸಿರ್ ಮೌಲವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಜೀಜ್ ಅಜ್ಮೀರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







