ಸುಳ್ಯ:ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣ ಗೌಡ ಅವರು ಡಿ.27ರಂದು ಸುಳ್ಯಕ್ಕೆ ಭೇಟಿ ನಡೆಸಿದರು. ಈ ಸಂದರ್ಭದಲ್ಲಿ ಸುಳ್ಯದ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ಮಾಡಿದರು. ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ಎಲ್ಲಾ ಇಲಾಖೆಗಳಿಗೆ ಜವಾಬ್ದಾರಿ ಇದೆ. ಮಕ್ಕಳ ಶಿಕ್ಷಣ, ಮಕ್ಕಳ ಸಂರಕ್ಷಣೆ ಬಗ್ಗೆ ಎಲ್ಲಾ
ಇಲಾಖೆಗಳು ಆದ್ಯೆತೆ ನೀಡಬೇಕು, ಬಾಲ್ಯ ವಿವಾಹ, ಪೋಕ್ಸೋ ಪ್ರಕರಣ ನಡೆಯದಂತೆ ಗಮನ ನೀಡಬೇಕು. ಮಾದಕ ವಸ್ತುಗಳ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.ಮಕ್ಕಳ ಹಕ್ಕು ರಕ್ಷಣೆಗೆ ಗ್ರಾಮಮಟ್ಟದ ಕಾವಲು ಪಡೆ ಸಮಿತಿ ರಚಿಸಬೇಕು, ಮಕ್ಕಳ ಗ್ರಾಮ ಸಭೆ, ಪ್ರತಿ 3 ತಿಂಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಕ್ಕಳ ಹಕ್ಕು ಸಂರಕ್ಷಣೆ ಕುರಿತು ವರದಿ ನೀಡಬೇಕು ಇತ್ಯಾದಿ ಸೂಚನೆಗಳನ್ನು ಅವರು ಅಧಿಕಾರಿಗಳಿಗೆ ನೀಡಿದರು.

ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ಕಾರ್, ಗ್ರೇಡ್ 2 ತಹಶೀಲ್ದಾರ್ ಎಂ. ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್, ಎಸ್ಐ ಸರಸ್ವತಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳ ಸಿ, ಕ್ಷೇತ್ರ ಶಿಕ್ಷಣ ಸಂಯೋಜಕಿ ಸಂಧ್ಯಾಕುಮಾರಿ ಮಕ್ಕಳ ರಕ್ಷಣಾಧಿಕಾರಿ(ಸಾಂಸ್ಥಿಕ) ಕುಮಾರ್, ಮಕ್ಕಳ ರಕ್ಷಣಾಧಿಕಾರಿ ವಝೀರ್ ಅಹಮ್ಮದ್, ಮಕ್ಕಳ ಆಪ್ತ ಸಮಾಲೋಚಕಿ ಜಸ್ಮಿತಾ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೃಷ್ಣ.ಬಿ, ಪ್ರವೀಣ್ ಕುಮಾರ್, ಬಿಸಿಎಂ ಇಲಾಖೆಯ ವಿಜಯ, ತಾ.ಪಂ.ಸಹಾಯಕ ನಿರ್ದೇಶಕ ರವಿಚಂದ್ರ, ತಾ.ಪಂ.ಮಾಜಿ ಅಧ್ಯಕ್ಷ ಶಂಕರ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.

.