ಸುಳ್ಯ:ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್ ಅವರು ಜು. 25 ರಂದು ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಸುಳ್ಯ ಪ್ರಭಾರ ವೃತ ನಿರೀಕ್ಷರಾದ ಸತೀಶ್,ಸುಳ್ಯ ಠಾಣಾ ಉಪ ನಿರೀಕ್ಷಕರುಗಳಾದ ಈರಯ್ಯ ದೂಂತೂರು,ಸರಸ್ವತಿ ಹಾಗೂ
ಸಿಬ್ಬಂದಿಗಳು ಠಾಣೆಯ ವತಿಯಿಂದ ಗೌರವ ವಂದನೆ ಸಲ್ಲಿಸಿದರು. ಠಾಣೆಗೆ ಭೇಟಿ ನೀಡಿದ ಎಸ್ ಪಿ ಯವರು ,ಪೊಲೀಸ್ ಠಾಣೆ, ಕ್ವಾಟ್ರಸ್ ಕಟ್ಟಡ ಪರಿಸರ ವೀಕ್ಷಿಸಿ ಠಾಣಾ ಕಡತಗಳ ನಿರ್ವಹಣೆಯ ಬಗ್ಗೆ ಪರಿಶೀಲಿಸಿ,ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಠಾಣಾ ಕರ್ತವ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು
ಈ ಸಂಧರ್ಭದಲ್ಲಿ ದ.ಕ ಜಿಲ್ಲಾ ಅಡಿಷನಲ್ ಎಸ್ ಪಿ ರಾಜೇಂದ್ರ ,ಪುತ್ತೂರು ಉಪ ವಿಭಾಗದ ಡಿ ವೈ ಎಸ್ ಪಿ ಅರುಣ್ ನಾಗೇ ಗೌಡ ಉಪಸ್ಥಿತರಿದ್ದರು.