ಸುಳ್ಯ:ಭಾ. ಕೃ. ಸಂ. ಪ. ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಹಾಗೂ ಸುಳ್ಯ ತಾಲೂಕು ಪಂಚಾಯತ್ ಸಹಯೋಗದಲ್ಲಿ ಸುಳ್ಯ ತಾಲೂಕಿನ ಕೃಷಿ ಸಖಿಯರು ಮತ್ತು ಪಶುಸಖಿಯರಿಗಾಗಿ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪ್ಯಾರಾ ವಿಸ್ತರಣಾ ಕಾರ್ಯಕರ್ತರಾಗಿರುವ
ಕೃಷಿ ಸಖಿಯರು ಮತ್ತು ಪಶುಸಖಿಯರಿಗೆ ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆ, ಸಾವಯವ ಗೊಬ್ಬರಗಳು ಹಾಗೂ ಜೈವಿಕ ಗೊಬ್ಬರಗಳ ಮೂಲಕ ಸಮಗ್ರ ಪೋಷಕಾಂಶ ನಿರ್ವಹಣೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಸುಳ್ಯ ತಾ.ಪಂ. ಇಓ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಈರದಾಸಪ್ಪ ಇ ಅವರು ಗೋಡಂಬಿ ಹಾಗೂ ಅಡಿಕೆ ಬೆಳೆಗಳಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆಯ ಅಗತ್ಯತೆ ಕುರಿತು

ವಿವರಿಸಿದರು.ಡಾ. ಅಶ್ವತಿ ಚಂದ್ರಕುಮಾರ್ ಅವರು ಮಣ್ಣಿನ ಆರೋಗ್ಯ ಚೀಟಿ ಹಾಗೂ ಅಗತ್ಯಾಧಾರಿತ ಗೊಬ್ಬರ ಬಳಕೆಯ ಮಹತ್ವವನ್ನು ತಿಳಿಸಿದರು. ಸಂಜೀವಿನಿ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ವೇತಾ ವಿ ಜಿ ಯವರು ಗೇರು ಕೃಷಿಯ ಬಗ್ಗೆ ಮಾತನಾಡಿದರು. ತರಬೇತಿ ಬಳಿಕ ಸಖಿಯರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಒಟ್ಟು 32 ಕೃಷಿ ಸಖಿ, ಪಶುಸಖಿಯರು ಭಾಗವಹಿಸಿದ್ದರು. ಸಂಜೀವಿನಿ ತಾಲೂಕು ಪಂಚಾಯತ್ ಸಿಬ್ಬಂದಿಗಳಾದ ಜಯಲಕ್ಷ್ಮಿ, ಶ್ರೀನಿಧಿ, ಹೃತಿಕ್ ಹಾಗೂ ತಾಲೂಕ್ ಪಂಚಾಯತ್ ಸಿಬ್ಬಂದಿಗಳಾದ ರಾಜೇಶ್, ಪ್ರಸಾದ್ , ಜಯಪ್ರಕಾಶ್ ಸಹಕರಿಸಿದರು.ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.











