ಸುಳ್ಯ:ದೇವರಾಜ ಅರಸು ನಿಗಮದ ವತಿಯಿಂದ ಮಹಿಳೆಯರಿಗೆ ಕೊಡಲ್ಪಡುವ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಅರ್ಜಿ ಸಲ್ಲಿಸಿ ಆಯ್ಕೆಗೊಂಡ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ
ಶಾಸಕಿ ಭಾಗೀರಥಿ ಮುರುಳ್ಯ ದೇವರಾಜು ಅರಸು ನಿಗಮದಿಂದ ಸ್ವಉದ್ಯೋಗಕ್ಕೆ ಅರ್ಜಿ ಸಲ್ಲಿದ ಕೆಲವರಿಗೆ ಸಿಕ್ಕಿದ್ದು ಮುಂದೆ ಉಳಿದವರು ಅರ್ಜಿ ಸಲ್ಲಿಸಿದಾಗ ಮಾನದಂಡಗಳಂತೆ ಸಿಗಲಿದೆ. ಮಹಿಳೆಯರು ತಮ್ಮ ಉದ್ಯೋಗದಲ್ಲಿ ಹೊಸ ಹೊಸ ತನಗಳನ್ನು ಕಂಡು ಕೊಳ್ಳಬೇಕು ಎಂದು ಹೇಳಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ಅಭಿವೃದ್ಧಿ ಅಧಿಕಾರಿ ಜಯಶ್ರೀ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಈ ಸಂದರ್ಭದಲ್ಲಿ ಸಿಬ್ಬಂದಿಗಳು, ಸಾರ್ವಜನಿಕರು,ಶಾಸಕರ ಸರಕಾರಿ ಆಪ್ತ ಸಹಾಯಕ ಹರೀಶ್ ,ಹಾಗೂ ಪ್ರಸಾದ್ ಕಾಟೂರ್ ಉಪಸ್ಥಿತರಿದ್ದರು.











