ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಬೆಳಿಗ್ಗೆ ಮಂಗಳೂರಿನ ಹಳೆ ಬಂದರಿಗೆ ಭೇಟಿ ನೀಡಿ, ಮೀನುಗಾರ ಕಾರ್ಮಿಕರು, ಮಹಿಳೆಯರೊಂದಿಗೆ ಚರ್ಚಿಸಿದರು.ಮೀನುಗಾರರ ಸಮಸ್ಯೆ ಆಲಿಸಿದರು, ಶೌಚಾಲಯದಂತಹ ಮೂಲ ಸೌಕರ್ಯದ ಕೊರತೆ ಇರುವ ಬಗ್ಗೆ ಸಿಎಂ ಅವರ ಗಮನಕ್ಕೆ ತರಲಾಯಿತು .ನಂತರ
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ
ಮೀನುಗಾರ ಸಂಘಟನೆ ಪ್ರಮುಖರು ಶುಕ್ರವಾರ ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್ ಮಾಡುವ ಸಂಬಂಧ ತಾಂತ್ರಿಕ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಳೆ ಬಂದರು ಪ್ರದೇಶದಲ್ಲಿ ಪ್ರತ್ಯೇಕ ಆಸ್ಪತ್ರೆ, ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಾಗುವುದು.
ಬೋಟ್ ಹತ್ತಿ ಸಮುದ್ರದಲ್ಲಿ ವಿಹಾರ ಮಾಡಿದ ಮುಖ್ಯಮಂತ್ರಿ, ಅಳಿವೆಬಾಗಿಲಿನಲ್ಲಿ ಇತ್ತೀಚೆಗೆ ಬೋಟ್ ಮುಳುಗಡೆಯಾಗಿದ್ದ ಸ್ಥಳ ವೀಕ್ಷಿಸಿದರು.ಬಳಿಕ ದಕ್ಕೆಯ ಜೆಟ್ಟಿ ಬಳಿ ಎಂಜಿನಿಯರ್ಗಳು ಹಾಗೂ ಬಂದರು ಇಲಾಖೆ ಅಧಿಕಾರಿಗಳಿಂದ ದಕ್ಕೆ ವಿಸ್ತರಣೆ ಮತ್ತು ಜೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ಮೀನು ಮಾರುಕಟ್ಟೆಗೂ ಭೇಟಿ ನೀಡಿದ ಮುಖ್ಯಮಂತ್ರಿ ವ್ಯಾಪಾರಸ್ಥರ ಯೋಗಕ್ಷೇಮ ವಿಚಾರಿಸಿದರು








