ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ಘೋಷಿಸಿದ್ದರೆ.ಸಿದ್ದರಾಮಯ್ಯ ಅವರು ಗುರುವಾರ ಮಧ್ಯಾಹ್ನ ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಹುದ್ದೆಗೆ ತಮ್ಮ ರಾಜೀನಾಮೆ ನೀಡಿದರು. ಸಿದ್ದರಾಮಯ್ಯ ಅವರಿಗೆ ಕೆಲವು ಸಚಿವರು, ಶಾಸಕರು ಸಾಥ್ ನೀಡಿದರು. ರಾಜ್ಯಪಾಲರ ಅನುಪಸ್ಥಿತಿಯಲ್ಲಿ, ಅವರ ವಿಶೇಷ ಕಾರ್ಯದರ್ಶಿ ಲ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ಬಳಿಕ
ಅವರು ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ರಾಜೀನಾಮೆಯನ್ನು ಬಹಿರಂಗವಾಗಿ ಘೋಷಿಸಿದರು.
ಕರ್ನಾಟಕದ 7 ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. 2 ಬಾರಿ ಸಿಎಂ, ಎರಡು ಬಾರಿ ವಿಪಕ್ಷ ನಾಯಕನಾದೆ. ನನಗೆ ಅವಕಾಶ ಮಾಡಿಕೊಟ್ಟ ಸೋನಿಯಾ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.
ಹೈ ಕಮಾಂಡ್ ನವರ ಸೂಚನೆ ಹಿನ್ನಲೆ ರಾಜೀನಾಮೆ ಸಲ್ಲಿಸಿದ್ದೇನೆ.
ಮುಂದಿನ ಮುಖ್ಯಮಂತ್ರಿ ಬಗ್ಗೆ ಹೈಕಮಾಂಡ್ ಘೋಷಿಸಲಿದೆ.
ಕಾಂಗ್ರೆಸ್ 137 ಸ್ಥಾನಗಳನ್ನು ಹೊಂದಿದೆ.
ಸಂಪೂರ್ಣ ಬಹುಮತ ಕಾಂಗ್ರೆಸ್ ಗೆ ಇದೆ,ನನ್ನ ಪಾಲಿಗೆ ಸಂವಿಧಾನ ಧರ್ಮ ಮತದಾರರು ಅಭಿಮಾನಿ ದೇವರು ಎಂದು ಸಿದ್ದರಾಮಯ್ಯ ಭಾವುಕರಾಗಿ ನುಡಿದರುನೆಲ, ಜಲ, ಭಾಷೆಯನ್ನು ನನ್ನ 8 ವರ್ಷಗಳ ಒಟ್ಟು ಅವಧಿಯಲ್ಲಿ ನಾನು ಬಿಟ್ಟು ಕೊಟ್ಟಿಲ್ಲ.ಹಣ, ಅಧಿಕಾರಕ್ಕೆ ಆಸೆ ಪಟ್ಟಿಲ್ಲ.ಬಡವರಿಗೆ ಸದಾ ನೆರವಾಗಿದ್ದೇನೆ.ಸಂವಿಧಾನ ಸಂರಕ್ಷಣೆಗೆ ನಾನು ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ ಎಂದರು.















