ಸುಳ್ಯ:ಸಕಲ ಜೀವಜಾಲಗಳ ಪೈಕಿ ವಸ್ತ್ರಗಳನ್ನು ಧರಿಸುವುದು ಮನುಷ್ಯನ ವಿಶೇಷತೆ. ವಾಯು, ನೀರು, ಆಹಾರದಂತೆ ಮನುಷ್ಯನಿಗೆ ಅತೀ ಅಗತ್ಯವಾದುದು ಬಟ್ಟೆಗಳು.ಆಕರ್ಷಕ ವಸ್ತ್ರ ಧಾರಣೆ ಮನುಷ್ಯನ ವ್ಯಕ್ತಿತ್ವವನ್ನೂ ಅಂದವನ್ನೂ ಹೆಚ್ಚಿಸಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಮನಸ್ಸಿಗೆ, ಹೃದಯಕ್ಕೆ ಇನ್ನಿಲ್ಲದ ಆನಂದವನ್ನು ನೀಡುತ್ತದೆ. ಅತ್ಯುತ್ತಮ ವಸ್ತ್ರಧಾರಣೆ ಇನ್ನಿಲ್ಲದ ಪ್ರೌಢಿಮೆ ಹಾಗೂ ಅಂದವನ್ನು ಹೆಚ್ಚಿಸುತ್ತದೆ. ಹಾಗಾದರೆ ಅತ್ಯುತ್ತಮ ಗುಣ ಮಟ್ಟದ ಮತ್ತು ಅತೀ ಕಡಿಮೆ ದರದಲ್ಲಿ ಬಟ್ಟೆಗಳು ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸುಳ್ಯದ ಶೀತಲ್ ಕಲೆಕ್ಷನ್. ಪುರುಷರ, ಮಹಿಳೆಯರ, ಮಕ್ಕಳ ಹೀಗೆ ಎಲ್ಲಾ

ವಯೋಮಾನದ ಜನರಿಗೆ ಗುಣಮಟ್ಟದ ಅತ್ಯಾಕರ್ಷಕ ವಸ್ತ್ರಗಳನ್ನು ನೀಡುವ ಮೂಲಕ ಬಟ್ಟೆಗಳ ಗುಣಮಟ್ಟ ಮತ್ತು ತನ್ನ ಗ್ರಾಹಕ ಸ್ನೇಹಿ ನಿಲುವಿನಿಂದ ಮನೆ ಮಾತಾಗಿರುವ ಮಳಿಗೆ ಸುಳ್ಯ ಖಾಸಗೀ ಬಸ್ ನಿಲ್ದಾಣದ ಬಳಿ ಇರುವ ಶೀತಲ್ ಕಲೆಕ್ಷನ್. ಇದೀಗ ಸುಳ್ಯದಲ್ಲಿ ಎರಡು ದಶಕಗಳನ್ನು ಪೂರೈಸುತ್ತಿರುವ ಶೀತಲ್ ಕಲೆಕ್ಷನ್ ಸುಂದರವಾಗಿ ನವೀಕರಣಗೊಂಡು ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಗುಣಮಟ್ಟದ ಬಟ್ಟೆಗಳ ಜೊತೆಗೆ ಅತ್ಯಾಕರ್ಷಕ ಆಫರ್ ಹಾಗೂ ಭರ್ಜರಿ ದರ ಕಡಿತ ಮಾರಾಟದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.
2004 ಸೆ.26ರಂದು ಸುಳ್ಯದ ಖಾಸಗೀ ಬಸ್ ನಿಲ್ದಾಣದ ಬಳಿಯಲ್ಲಿ ಶೀತಲ್ ಕಲೆಕ್ಷನ್ ಆರಂಭಗೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಎರಡು ದಶಕಗಳಿಂದ ಗ್ರಾಹಕರ ಸಂತೃಪ್ತಿಗೆ ಪ್ರಾಧಾನ್ಯತೆ ನೀಡಿದ ಸಂಸ್ಥೆ ಹಿಂತಿರುಗಿ

ನೋಡಿಲ್ಲ. ಜನರ, ಗ್ರಾಹಕರ ಭರಪೂರ ಬೆಂಬಲದೊಂದಿಗೆ ಯಶಸ್ವಿಯಾಗಿ ಮುನ್ನಡೆದಿದೆ. ಇದೀಗ ಮಳಿಗೆಯಲ್ಲಿ ಎಲ್ಲಾ ವಯೋಮಾನದವರಿಗೆ ಒಪ್ಪುವ ಬ್ರಾಂಡೆಡ್ ಹಾಗೂ ಇತರ ವಸ್ತ್ರಗಳ ಅಪೂರ್ವ ಸಂಗ್ರಹವೇ ಬಂದಿದೆ.
40 ವರ್ಷಗಳ ಅನುಭವ- ಬಿಟ್ಟರೂ ಕೈ ಬಿಡದ ವಸ್ತ್ರೋದ್ಯಮ:
ಶೀತಲ್ ಕಲೆಕ್ಷನ್ನ ಮಾಲಕ ಸಿ.ಅಬ್ದುಲ್ ರಜಾಕ್ ಹಾಜಿ ಅವರಿಗೆ ವಸ್ತ್ರೋದ್ಯಮ ಕ್ಷೇತ್ರದಲ್ಲಿ 40 ವರ್ಷಗಳ ಸುದೀರ್ಘ ಅನುಭವವನ್ನು ಪಡೆದಿದ್ದಾರೆ. ಈ ಉದ್ಯಮವನ್ನು ಒಂದೊಮ್ಮೆ ಬಿಟ್ಟರೂ ಇವರನ್ನು ಬಿಡದ ಅವಿನಾಭಾವ ನಂಟು ಇವರಿಗೆ ಈ ವಸ್ತ್ರೋದ್ಯಮದೊಂದಿಗೆ ಇದೆ. ದೇಶದ ವಾಣೀಜ್ಯ ನಗರಿ ಮುಂಬೈನಲ್ಲಿ ವಸ್ತ್ರ ವ್ಯಾಪಾರದಲ್ಲಿ ಸುದೀರ್ಘ ಅನುಭವ ಹೊಂದಿರುವ ಅವರು ಕಳೆದ ಎರಡು ದಶಕಗಳಿಂದ ಸುಳ್ಯದ ಜನತೆಗೆ ತನ್ನ ವ್ಯಾಪಾರದ ಅನುಭವವನ್ನು ಧಾರೆಯೆರೆಯುತ್ತಿದ್ದಾರೆ. ವಿಟ್ಲ ಚಂದಳಿಕೆಯವರಾದ ಅಬ್ದುಲ್ ರಜಾಕ್ ಹಾಜಿಯವರು ಉದ್ಯೋಗ ಕ್ಕೆಂದು

ಗಲ್ಫ್ ರಾಷ್ಟ್ರಕ್ಕೆ ತೆರಳಲು ಮುಂಬೈ ಸೇರಿದರು. ಆದರೆ ಬಳಿಕ ಅವರಿಗೆ ಮುಂಬೈ ಬಿಡಲು ಮನಸ್ಸು ಒಪ್ಪಲಿಲ್ಲ. ಸುಮಾರು 10 ವರ್ಷಗಳ ಕಾಲ ಬೀದಿ ಬದಿಯಲ್ಲಿ ವಸ್ತ್ರಗಳು, ಫ್ಯಾನ್ಸಿ, ಬ್ಯಾಗ್ ಮತ್ತಿತರ ವ್ಯಾಪಾರ ಮಾಡಿದರು. ಬಳಿಕ ಮುಂಬೈನಲ್ಲಿಯೇ ವಸ್ತ್ರ ಮಳಿಗೆ ಆರಂಭಿಸಿದರು. ಅದು ಅವರ ಕೈ ಹಿಡಿಯಿತು. ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲ ಮುಂಬೈನಲ್ಲಿ ವಸ್ತ್ರ ಮಳಿಗೆ ನಡೆಸಿದರು. ಆ ಸಂದರ್ಭದಲ್ಲಿ ವಸ್ತ್ರೋದ್ಯಮದ ಆಳ ಅಗಲ ಅರಿತ ದೊಡ್ಡ ಅನುಭವವೇ ಇವರಿಗೆ ಲಭಿಸಿತು. ಬಳಿಕ ವಸ್ತ್ರೋದ್ಯಮಕ್ಕೆ ಗುಡ್ಬೈ ಹೇಳಿದ ಅವರು ತನ್ನ ಊರಾದ ವಿಟ್ಲಕ್ಕೆ ಬಂದು ಕೃಷಿ ಕಾರ್ಯದಲ್ಲಿ ತೊಡಗಿಸಿದರು. ಆದರೆ ಅವರಿಗೆ ಏನೋ ಕೃಷಿ ಕ್ಷೇತ್ರ ಅಷ್ಟಾಗಿ ಹಿಡಿಸಲಿಲ್ಲ. ಕೃಷಿ ಕ್ಷೇತ್ರ ಬಿಟ್ಟು ಮತ್ತೆ ಸುಳ್ಯದಲ್ಲಿ ಶೀತಲ್ ಕಲೆಕ್ಷನ್ ಮೂಲಕ ಮತ್ತೆ ವಸ್ತ್ರೋದ್ಯಮಕ್ಕೆ ಮರಳಿದರು.

ಕುಂಬೋಳ್ ತಂಙಳ್ ಕುಟುಂಬ ಹಾಗೂ ಶೀತಲ್ ಹಾಜಿ:
ಸುಳ್ಯದಲ್ಲಿ ಶೀತಲ್ ಹಾಜಿ ಎಂದೇ ಖ್ಯಾತರಾದ ಅಬ್ದುಲ್ ರಜಾಕ್ ಹಾಜಿಯವರು ಕುಂಬೋಳ್ ತಂಙಳ್ ಕುಟುಂಬದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಕುಂಬೋಳ್ ತಂಙಳ್ ಅವರ ಪ್ರಾರ್ಥನಾ ಪೂರಕ ಅನುಗ್ರಹ ಮತ್ತು ಜನರ ಪ್ರೀತಿ ತನ್ನ ವ್ಯಾಪಾರದ ಯಶಸ್ಸಿಗೆ ಕಾರಣ ಎಂಬುದು ರಜಾಕ್ ಹಾಜಿಯವರ ಮನದಾಳದ ಮಾತು. ಇವರ ವ್ಯಾಪಾರಕ್ಕೆ ‘ಶೀತಲ್’ ಎಂಬ ಹೆಸರನ್ನು ಕುಂಬೋಳ್ ಉಮ್ಮರ್ ಕುಂಞಿ ತಂಙಳ್ ಅವರು ಸೂಚಿಸಿದ್ದರು. ಸುಳ್ಯದಲ್ಲಿಯೇ ನೆಲೆಸಿ ವಸ್ತ್ರೋದ್ಯಮದಲ್ಲಿ ಮುಂದುವರಿಯುವಂತೆ ಅವರು ಸೂಚಿಸಿದ್ದರು ಎಂದು ರಜಾಕ್ ಹಾಜಿ ಹೇಳುತ್ತಾರೆ. ಕುಂಬೋಳ್ ಕುಟುಂಬದ ಜೊತೆ ನಿರಂತರ ಅವಿನಾಭಾವ ಸಂಬಂಧ ಇದ್ದು ಅವರ ಆಶೀರ್ವಾದ ಈ ಕ್ಷೇತ್ರದಲ್ಲಿ ಯಶಸ್ಸಿಗೆ ಸಹಕಾರ ನೀಡಿದೆ ಎನ್ನುತ್ತಾರವರು.

ಗುಣಮಟ್ಟಕ್ಕೆ ಆದ್ಯತೆ:
ಗ್ರಾಹಕರ ಸಂತೃಪ್ತಿಯೇ ನಮಗೆ ಮುಖ್ಯ ಎನ್ನುವ ಅಬ್ದುಲ್ ರಜಾಕ್ ಹಾಜಿಯವರು ಗುಣಮಟ್ಟಕ್ಕೆ ಇನ್ನಿಲ್ಲದ ಆದ್ಯತೆ ನೀಡುತ್ತಾರೆ. ಆದುದರಿಂದ ರಜಾಕ್ ಹಾಜಿಯವರೇ ಬಟ್ಟೆಯನ್ನು ಆಯ್ಕೆ ಮಾಡಿ ತರುತ್ತಾರೆ. ಮುಂಬೈ, ಅಹಮ್ಮದಾಬಾದ್, ಸೂರತ್, ಕೋಲ್ಕತ್ತಾ, ಸೂರತ್, ಬೆಂಗಳೂರು, ಪಾಲಿ ಮತ್ತಿತರ ಕಡೆಗಳಿಗೆ ಇವರೇ ತೆರಳಿ ಬಟ್ಟೆಗಳನ್ನು ಖರೀದಿಸಿ ತರುತ್ತಾರೆ. ಇದರಿಂದ ಗುಣಮಟ್ಟದ ಬಗ್ಗೆ, ಬಟ್ಟೆಗಳ ಬಗ್ಗೆ ಯಾವುದೇ ದೂರು ಇದುವರೆಗೆ ಬಂದಿಲ್ಲ. ಗುಣಮಟ್ಟದ ಬಟ್ಟೆಯ ಜೊತೆಗೆ ಮಿತ ದರವೂ ಇವರ ಶೀತಲ್ ಕಲೆಕ್ಷನ್ನ ಹೈಲೈಟ್ಸ್ ಇದರಿಂದ ಶೀತಲ್ ಗ್ರಾಹಕರ ಜನಪ್ರಿಯ ಮಳಿಗೆಯಾಗಿಸಿದೆ. ರಜಾಕ್ ಹಾಜಿ ಜೊತೆ ಸಹೋದರರು ಪತ್ನಿ ರಹಿಯಾನ, ಪುತ್ರ ಮಹಮ್ಮದ್ ತಸ್ನೀಮ್ ಉದ್ಯಮಕ್ಕೆ ಸಹಕಾರ ನೀಡುತ್ತಾರೆ. ಪುತ್ರಿ ಆಯಿಷತ್ ತಹಸೀನ್, ಅಳಿಯ ಪ್ರೊ.ಇಸ್ಮಾಯಿಲ್ ಶಾಫಿ ಅವರು ಮಂಗಳೂರು ಪಿಎ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಇನ್ನೋರ್ವ ಪುತ್ರ ಮಹಮ್ಮದ್ ತಮೀಮ್ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.

ಆಕರ್ಷಕ ಆಫರ್- ಫೆ.9ರಂದು ಚಾಲನೆ:
20ನೇ ವರ್ಷದಲ್ಲಿ ಸಂಸ್ಥೆ ಮುನ್ನಡೆಯುವ ಕಾರಣ ಸಂಸ್ಥೆ ಆಕರ್ಷಕವಾಗಿ ನವೀಕರಣಗೊಳ್ಳುತ್ತಿದೆ. ಅಲ್ಲದೆ ಆಕರ್ಷಕ ಆಫರ್ ಹಾಗೂ ದರ ಕಡಿತ ಮಾರಾಟ ನಡೆಯುತಿದೆ. ಫೆ.9ರಿಂದ ಫೆ.28ರ ತನಕ ಪ್ರತಿ ಖರೀದಿಗೆ ಶೇ.30ರವರೆಗೆ ದರ ಕಡಿತ ಮಾರಾಟವನ್ನೂ ಘೋಷಿಸಿದೆ. ಅಲ್ಲದೆ ಫೆ.9ರಿಂದ ಬಟ್ಟೆಗಳ ಖರೀದಿಗೆ ಗಿಫ್ಟ್ ಕೂಪನ್ ನೀಡಲಾಗುತ್ತದೆ. ಸೆಪ್ಟ್ಂಬರ್ ತಿಂಗಳಲ್ಲಿ ಈ ಗಿಪ್ಟ್ ಕೂಪನ್ ಡ್ರಾ ನಡೆಯಲಿದ್ದು ಗ್ರಾಹಕರಿಗೆ ಅಕರ್ಷಕ ಬಂಪರ್ ಬಹುಮಾನ ಗೆಲ್ಲುವ ಅವಕಾಶ ಇದೆ. ಫೆ.9ರಂದು ಸವಿ ನೆನೆಪು ಕಾರ್ಯಕ್ರಮ ನಡೆಯಲಿದ್ದು ಗಣ್ಯರ ಉಪಸ್ಥಿತಿಯಲ್ಲಿ ಅಂದು ಸಂಸ್ಥೆಯ ಹೊಸ ಲೋಗೋ ಅನಾವರಣ, ಆಫರ್ಗಳು ಹಾಗೂ ಲಕ್ಕಿ ಗಿಪ್ಟ್ ಕೂಪನ್ಗಳ ಲಾಂಚ್ ನಡೆಯಲಿದೆ ಎಂದು ರಜಾಕ್ ಹಾಜಿ ತಿಳಿಸಿದ್ದಾರೆ.