ಕ್ರೈಸ್ಟ್ಚರ್ಚ್: ಭಾರತ ತಂಡದ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಹಿಡಿತ ಸಾಧಿಸಿದೆ. ಮೊಲದ ಇನಿಂಗ್ಸ್ನಲ್ಲಿ 110 ರನ್ಗಳ ಮುನ್ನಡೆ ಸಾಧಿಸಿದ ಕಿವೀಸ್, ಎರಡನೇ ಇನ್ನೀಂಗ್ಸ್ನಲ್ಲಿ ಮೂರನೇ ದಿನದಾಟ ಅಂತ್ಯಕ್ಕೆ
133 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. ಒಟ್ಟು 243 ರನ್ ಮುನ್ನಡೆಯಲ್ಲಿದೆ.46 ರನ್ ಗಳಿಸಿರುವ ರಚಿನ್ ರವೀಂದ್ರ ಹಾಗೂ ಈಗಷ್ಟೇ ಕ್ರೀಸ್ಗೆ ಬಂದ ಡೆರಿಲ್ ಮಿಚೇಲ್ (5 ರನ್) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಡೆವೋನ್ ಕಾನ್ವೆ (51 ರನ್) ಮತ್ತು ಹೆನ್ರಿ ನಿಕೋಲ್ಸ್ (22 ರನ್) ಗಳಿಸಿದರು.ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು. ಇದಕ್ಕೂ ಮೊದಲು ಭಾರತ ಪರ ಧ್ರುವ್ ಜುರೇಲ್ ಏಕಾಂಗಿ ಹೋರಾಟ ನಡೆಸಿದರು. ಅರ್ಧಶತಕ ಸಿಡಿಸಿದ ಅವರು ತಂಡ ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು.ಎರಡನೇ ದಿನದಾಟದ ಅಂತ್ಯಕ್ಕೆ 116 ರನ್ ಗಳಿಸುವಷ್ಟರಲ್ಲೇ 6 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಪರ ಜುರೇಲ್ 170 ಎಸೆತಗಳನ್ನು ಎದುರಿಸಿ 14 ಬೌಂಡರಿ ಸಹಿತ 88 ರನ್ ಕಲೆಹಾಕಿದರು. ಆಕಾಶ್ ದೀಪ್ (29 ರನ್) ಜೊತೆಗೂಡಿ 46 ರನ್, ಗುರ್ನೂರ್ ಬ್ರಾರ್ (10 ರನ್) ಜೊತೆ 9ನೇ ವಿಕೆಟ್ ಪಾಲುದಾರಿಕೆಯಲ್ಲಿ 64 ರನ್ ಸೇರಿಸಿದರು. ಹೀಗಾಗಿ ತಂಡದ ಮೊತ್ತ 246ಕ್ಕೆ ತಲುಪಿತು. ಕಿವೀಸ್ ಪರ
ಜೇಮಿಸನ್ ನಾಲ್ಕು ವಿಕೆಟ್ ಉರುಳಿಸಿದರೆ, ಡಫಿ, ಹೆನ್ರಿ ಹಾಗೂ ಸ್ಮಿತ್ ತಲಾ ಎರಡು ವಿಕೆಟ್ ಪಡೆದರು.

















