ಸುಳ್ಯ:ಯೋಗ ಸಪ್ತಾಹ 2026, ಇದರ ಅಂಗವಾಗಿ ‘ಆರೋಗ್ಯಕರ ವಯಸ್ಸಿಗಾಗಿ ಯೋಗ’ ಎನ್ನುವ ಥೀಮ್ ನೊಂದಿಗೆ ಯೋಗ ದಿನಾಚರಣೆಯನ್ನು ಶ್ರೀ ಶಾರದ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳು ಹಾಗೂ
ಸೂರ್ಯ ನಮಸ್ಕಾರದ ಪ್ರಾತ್ಯಕ್ಷಿಕೆಯನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಕ್ಷತ್ ಪಿಕೆ ಅವರ ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ಯೋಗ ಶಿಕ್ಷಕ ಸಂತೋಷ್ ಮುಂಡುಕಜೆ ಹಾಗೂ ಪತ್ನಿ ಯೋಗ ಶಿಕ್ಷಕಿ ಪ್ರಸ್ವಿಜ ಯೋಗ ಪ್ರಾತ್ಯಕ್ಷಿಕೆಯ ಸಹಿತ ಯೋಗದ ಮಹತ್ವದ ಬಗ್ಗೆ

ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಈ ಯೋಗ ದಿನಾಚರಣೆ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸ್ವರ್ಣಕಲ ಎ.ಎಸ್ ವಹಿಸಿದ್ದರು. ಸಮಾಜಶಾಸ್ತ್ರ ಉಪನ್ಯಾಸಕಿ ಕೃಪಾಶ್ರೀ ಸ್ವಾಗತಿಸದರು. ಜೀವಶಾಸ್ತ್ರ ಉಪನ್ಯಾಸಕ ದಯಾನಂದ ಒ.ಡಿ, ವಂದಿಸಿದರು ಕನ್ನಡ ಉಪನ್ಯಾಸಕಿ ಗಾಯತ್ರಿ
ಕಾರ್ಯಕ್ರಮ ನಿರೂಪಿಸಿದರು. ಮಾಡಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







