ಸುಳ್ಯ:ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 11 ನೇ ವರ್ಷದ ಆಚರಣೆಯ ಭಾಗವಾಗಿ ಬಿಜೆಪಿ ಕರ್ನಾಟಕದ ವತಿಯಿಂದ
ಸಂಕಲ್ಪದಿಂದ ಸಾಧನವರೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಕಲ್ಪದಿಂದ ಸಾಧನವರೆಗೆ ಕಾರ್ಯಕ್ರಮದ ದ.ಕ.ಜಿಲ್ಲಾ ತಂಡದ ಸಂಚಾಲಕರಾಗಿ ಹರೀಶ್ ಕಂಜಿಪಿಲಿ ಆಯ್ಕೆಯಾಗಿದ್ದಾರೆ.ಬಿಜೆಪಿ ಸುಳ್ಯ ಮಂಡಲ ಸಮಿತಿ ಮಾಜಿ ಅಧ್ಯಕ್ಷರಾದ
ಹರೀಶ್ ಕಂಜಿಪಿಲಿ ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ತಂಡದ ಸದಸ್ಯರಾಗಿ ರೂಪ ಡಿ ಬಂಗೇರ, ಮೋಹನ್.ಪಿ.ಎಸ್, ನಿತೇಶ್ ಶಾಂತಿವನ ಇದ್ದಾರೆ.
ಸಂಕಲ್ಪದಿಂದ ಸಾಧನವರೆಗೆ ಕಾರ್ಯಕ್ರಮದ ಸುಳ್ಯ ಮಂಡಲ ಸಂಚಾಲಕರಾಗಿ ಪುಲಸ್ಯ ರೈ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಆಶಾ ತಿಮ್ಮಪ್ಪ ಹಾಗೂ ಪದ್ಮನಾಭ ಶೆಟ್ಟಿ ಪೆರುವಾಜೆ ಆಯ್ಕೆಯಾಗಿದ್ದಾರೆ. ಮೋದಿ ಸರಕಾರದ 11 ವರ್ಷದ ಸಾಧನೆಗಳನ್ನು ಜನಮಾನಸಕ್ಕೆ ತಲುಪಿಸುವ ಈ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.