ಸುಳ್ಯ:ಮಕ್ಕಳು ಈ ಭೂಮಿಯ ಮತ್ತು ಈ ದೇಶದ ಭವಿಷ್ಯ.ಮಕ್ಕಳ ಭವಿಷ್ಯವನ್ನು ರೂಪಿಸುವ ಮತ್ತು ಆದರ್ಶ ಸಮಾಜ ಕಟ್ಟುವ ಪ್ರಯತ್ನ ಮಕ್ಕಳ ಹಬ್ಬದ ಮೂಲಕ ಸುಳ್ಯದಲ್ಲಿ ನಡೆದಿದೆ ಎಂದು ‘ಗ್ರೀನ್ ಹೀರೋ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ಅಭಿಪ್ರಾಯಪಟ್ಟಿದ್ದಾರೆ. ಸುಳ್ಯದ ರಂಗ ಮಯೂರಿ ಕಲಾ ಶಾಲೆ,ಪ್ರಣವ ಸೌಹಾರ್ದ ಸಹಕಾರಿ ಸಂಘ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಸುಳ್ಯದ
ಅಮರಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಆಯೋಜಿಸಲಾಗಿರುವ ಸಂಕಲ್ಪ ಮಕ್ಕಳ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’ ಅಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ.,ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಪಿ ಎಸ್ ಗಂಗಾಧರ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಅಧ್ಯಕ್ಷ ಜಿ.ಆರ್. ಪ್ರಸಾದ್, ಸುಳ್ಯದ ಸಂತ ಬ್ರಿಜಿಡ್ ಚರ್ಚ್ನ ಧರ್ಮಗುರು ಫಾ. ಒಲ್ವಿನ್ಎಡ್ವರ್ಡ್ ಡಿ ಕುನ್ಹಾ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಸ್ ಹರಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಕುಕ್ಕುಜಡ್ಕ, ವಿದ್ಯಾರ್ಥಿಗಳಾದ

ಶುಶಾಂಕ್ ಕೆ.ಜೆ, ಪ್ರಾಪ್ತಿ ಆಲಂಕಲ್ಯ, ಮಕ್ಕಳ ಹಬ್ಬ ಕಾರ್ಯಕ್ರಮದ ಸಂಯೋಜಕರಾದ ಯಶ್ವಿತ್ ಕಾಳಂಮನೆ, ರಂಜಿತ್ ಅಡ್ತಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಅಧ್ಯಕ್ಷ ಜಿ.ಆರ್. ಪ್ರಸಾದ್ ಸ್ವಾಗತಿಸಿ, ರಂಗಮಯೂರಿ ನಿರ್ದೇಶಕ ಹಾಗು ಕಾರ್ಯಕ್ರಮ ಸಂಯೋಜಕ ಲೋಕೇಶ್ ಊರುಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಆಲೆಟ್ಟಿ ಮತ್ತು
ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಸಂಕಲ್ಪ ಮಕ್ಕಳ ಹಬ್ಬ ಮೂರು ದಿನಗಳ ಕಾಲ ನಡೆಯಲಿದೆ. ವಿವಿಧ ವಿಚಾರಗೋಷ್ಟಿಗಳು, ಆರೋಗ್ಯಕರ ಆಹಾರ ಮೇಳ, ಪಾರಂಪರಿಕ ವಸ್ತುಗಳ ಪ್ರಾತ್ಯಕ್ಷಿಕೆ ಮತ್ತು ಹಳೆ ನಾಣ್ಯಗಳ ಪ್ರದರ್ಶನ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ತುಳು ಮತ್ತು ಅರೆಭಾಷೆ ಸಾಹಿತ್ಯ ಸ್ಪರ್ಧೆಗಳು, ಆಧುನಿಕ ತಾರಾಲಯ, ಮಕ್ಕಳಿಗಾಗಿ ವರ್ಚುವಲ್ ರಿಯಾಲಿಟಿ ಗೇಮ್ಸ್, ಎ.ಐ. ರೋಬೋಟ್ ಪ್ರದರ್ಶನ, ಪರಿಸರ ಜಾಗೃತಿ ಕಾರ್ಯಕ್ರಮವಾಗಿ ಮನೆಗೊಂದು ಗಿಡ, ಮಾತೃ ಭಾಷ ಪ್ರೇಮ, ಆಧಾರ್ ನೋಂದಣಿ ಮತ್ತು ಹಣಕಾಸು ಮಾಹಿತಿ, ಪುಸ್ತಕ ಮೇಳ, ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳು ನಡೆಯುತಿದೆ.








