ಸುಳ್ಯ:ಡಾ.ಉಮ್ಮರ್ ಬೀಜದಕಟ್ಟೆಯವರ ಸಜ್ಜನ ಪ್ರತಿಷ್ಠಾನ ವತಿಯಿಂದ ರಕ್ತದಾನಿಗಳು ಮತ್ತು ರಕ್ತದಾನಕ್ಕೆ ಪ್ರೋತ್ಸಾಹ ನೀಡಿ ಸಹಕರಿಸುವವರಿಗಾಗಿ ಕೊಡಮಾಡುವ ಸಜ್ಜನ ಶ್ರೇಷ್ಠ ಪ್ರಶಸ್ತಿಗೆ ಸುಳ್ಯದ ಹಿರಿಯ ರಕ್ತದಾನಿ ಪಿ.ಬಿ ಸುಧಾಕರೈ ಆಯ್ಕೆಯಾಗಿದ್ದಾರೆ.ಅತಿಹೆಚ್ಚು ರಕ್ತದಾನ ಮಾಡುವುದರೊಂದಿಗೆ
ರಕ್ತದಾನಕ್ಕೆ ಪ್ರೋತ್ಸಾಹ ನೀಡುತ್ತಿರುವ, ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳೂ ಆದ ಸುಧಾಕರ ರೈ ಅವರಿಗೆ ಪ್ರಶಸ್ತಿಯನ್ನು ವಿಶ್ವ ರಕ್ತದಾನಿಗಳ ದಿನಾಚರಣೆ ದಿನದಂದು ನೀಡಲಾಗುವುದು ಎಂದು ಬೆಂಗಳೂರಿಲ್ಲಿ ಸಜ್ಜನ ಪ್ರತಿಷ್ಠಾನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರತಿಷ್ಠಾನ ನಿರ್ದೇಶಕ ಶರೀಫ್ ಜಟ್ಟಿಪಳ್ಳ ತಿಳಿಸಿದ್ದಾರೆ















