ಬೆಂಗಳೂರು: ಅರವತ್ತೇಳನೇ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ರಾಜ್ಯದ ಪ್ರಮುಖ ಸಾಹಿತಿಗಳು,ತೆರೆಮರೆಯ ಸಾಧಕರು, ಕ್ರೀಡಾ ಪಟುಗಳು ಸಮಾಜ ಸೇವಕರು ಸೇರಿದಂತೆ ೬೭ ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ೧೦ ಸಂಘ-ಸಂಸ್ಥೆಗಳನ್ನೂ ಸರ್ಕಾರ ಗುರುತಿಸಿದೆ. ಪದ್ಮ ಪ್ರಶಸ್ತಿ ಮಾದರಿಯಲ್ಲಿ ಈ
ವರ್ಷ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲೂ ಹೊಸತನವನ್ನು ಮೆರೆದಿದೆ. ತೆರೆಮರೆಯಲ್ಲಿದ್ದ ಅರ್ಹ ಸಾಧಕರು, ಸಮಾಜದ ಹಿತಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಹತ್ತು ಸಂಘ-ಸಂಸ್ಥೆಗಳನ್ನು ಸರಕಾರ ಗುರುತಿಸಿದೆ. ಸಾಧಕರನ್ನು ರಾಜ್ಯೋತ್ಸವ ಆಯ್ಕೆ ಸಮಿತಿ ಹಾಗೂ ಸರಕಾರವೇ ಗುರುತಿಸಿ ನೀಡಿರುವುದು ಈ ಬಾರಿಯ ವಿಶೇಷ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮೊದಲೇ ಪ್ರಕಟಿಸಿದ್ದರು. ಆದಾಗಿಯೂ ಸಾಕಷ್ಟು ಅರ್ಜಿಗಳು ಬಂದಿದ್ದವು. ಈ ಪಟ್ಟಿಯಲ್ಲಿರುವ ಕೆಲ ಸಾಧಕರನ್ನೂ ಆಯ್ಕೆ ಸಮಿತಿ ಪರಿಗಣಿಸಿದ್ದು, ಒಟ್ಟಾರೆಯಾಗಿ ಸಮತೂಕದ ಪಟ್ಟಿ ಸಿದ್ದಗೊಂಡಿದೆ.
ಇಸ್ರೋ ಮಾಜಿ ನಿರ್ದೇಶಕ ಶಿವನ್, ಹಿರಿಯ ಸಾಹಿತಿ ಅ.ರಾ.ಮಿತ್ರ, ಪ್ರೊ.ಕೃಷ್ಣೇಗೌಡ, ಇಂಗ್ಲೀಷ್ ಕಡಲ್ಗಾಲುವೆ ಈಜಿದ ವಿಕಲಚೇತನ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ಸೋಲಿಗ ಸಮುದಾಯದಲ್ಲಿ ಸಹಕಾರದ ಬೆಳಕು ಚೆಲ್ಲಿದ ಸೋಲಿಗರ ಮಾದಮ್ಮ, ವನಸಂರಕ್ಷಣೆಗಾಗಿ ಜೀವನವನ್ನೇ ಮುಡುಪಾಗಿಟ್ಟ ರಾಮನಗರದ ಸಾಲುಮರದ ನಿಂಗಣ್ಣ, ಹಿರಿಯ ಚಲನಚಿತ್ರನಟರಾದ ದತ್ತಣ್ಣ, ಅವಿನಾಶ್, ಪೌರ ಸೇನಾನಿ ಶ್ರೀಮತಿ ಮಲ್ಲಮ್ಮ, ಉಡುಪಿ ಜಿಲ್ಲೆಯ ದೈವನರ್ತಕ ಗುಡ್ಡ ಪಾಣಾರ, ಕಿರುತೆರೆ ನಟ ಸಿಹಿಕಹಿ ಚಂದ್ರು, ಯಕ್ಷಗಾನ ಕಲಾವಿದರಾದ ಡಾ. ಎಂ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ವೀರಗಾಸೆ ಕಲಾವಿದ ಹಾವೇರಿಯ ಮಹೇಶ್ವರ ಗೌಡ ಲಿಂಗದಹಳ್ಳಿ, ಕಮಲಮ್ಮ ಸೂಲಗಿತ್ತಿ, ಹಿರಿಯ ಸಂಗೀತ ವಿದ್ವಾಂಸ ಅನಂತಾಚಾರ್ಯ ಬಾಳಾಚಾರ್ಯ, ಹಿರಿಯ ಪತ್ರಕರ್ತರಾದ ಎಚ್.ಆರ್. ಶ್ರೀಶ, ಜಿ.ಎಂ.ಶಿರಹಟ್ಟಿ, ಹಿರಿಯ ಸಂಶೋಧಕ ಡಾ.ಎಂ.ಜಿ.ನಾಗರಾಜ್ ಸೇರಿದಂತೆ 67 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸುವಲ್ಲೂ ಸಮಿತಿ ವಿಶೇಷ ಆಸಕ್ತಿ ನೀಡಿದೆ. ಈ ಪಟ್ಟಿಯಲ್ಲಿ ಇಸ್ರೋ ಮಾಜಿ ನಿರ್ದೇಶಕ ಶಿವನ್, ಸಾಹಿತಿ ಪ್ರೊ.ಕೃಷ್ಣೇಗೌಡ, ಅ.ರಾ.ಮಿತ್ರ, ವಿಭಿನ್ನ ಪಾತ್ರಗಳ ಮೂಲಕ ಚಲನಚಿತ್ರ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ದತ್ತಣ್ಣ, ಅವಿನಾಶ, ಕಿರುತೆರೆ ದಿಗ್ಗಜ ಸಿಹಿಕಹಿ ಚಂದ್ರು, ಇಂಗ್ಲೀಷ್ ಕಡಲ್ಗಾಲುವೆ ಈಜಿದ ಪ್ಯಾರಾ ಒಲಂಪಿಕ್ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್, ದಲಿತ ಯುವಕರನ್ನು ಉದ್ಯಮಿಯಾಗಿ ರೂಪಿಸುವಲ್ಲಿ ಅವಿರತ ಶ್ರಮಿಸಿದ ಕೋಲಾರದ ಉದ್ಯಮಿ ಜೆ,ಶ್ರೀನಿವಾಸನ್, ಶಿಕ್ಷಣ ತಜ್ಞ ಸುಬ್ಬರಾವ್ ಶೆಟ್ಟಿ ಅವರನ್ನು ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಜಾತಿ, ಪ್ರಾದೇಶಿಕ ನ್ಯಾಯ ಸೇರಿದಂತೆ ಎಲ್ಲ ಆಯಾಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹತ್ತು ಸಮಾಜ ಸೇವಾ ಸಂಘಟನೆಗಳನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೈಸೂರಿನ ರಾಮಕೃಷ್ಣ ಆಶ್ರಮ, ಬೆಂಗಳೂರಿನ ಅಮೃತ ಶಿಶು ನಿವಾಸ, ಸುಮನಾ ಪೌಂಡೇಶನ್, ಹಾವೇರಿಯ ಅಗಡಿ ಫಾರ್ಮ್ಸ್ , ಗದಗ ಜಿಲ್ಲೆಯ ಲಿಂಗಾಯತ ಪ್ರಗತಿಶೀಲ ಸಂಸ್ಥೆ ಸೇರಿದಂತೆ ಹತ್ತು ಸಾಮಾಜಿಕ ಸಂಘಟನೆಯನ್ನು ಆಯ್ಕೆ ಮಾಡಲಾಗಿದೆ.
2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 67 ಜನರ ಪಟ್ಟಿ:
ಚಲನಚಿತ್ರ ಕ್ಷೇತ್ರ
ದತ್ತಣ್ಣ -ಚಿತ್ರದುರ್ಗ
ಅವಿನಾಶ್-ಬೆಂಗಳೂರು
ಕಿರುತೆರೆ
ಸಿಹಿಕಹಿ ಚಂದ್ರು – ಬೆಂಗಳೂರು
ಸಂಕೀರ್ಣ ಕ್ಷೇತ್ರ
ಸುಬ್ಬರಾಮ ಶೆಟ್ಟಿ, ಆರ್‌ವಿ ಸಂಸ್ಥೆಗಳು, – ಬೆಂಗಳೂರು
ವಿದ್ವಾನ್ ಗೋಪಾಲಕೃಷ್ಣ ಶರ್ಮಾ- ಬೆಂಗಳೂರು
ಸೋಲಿಗರ ಮಾದಮ್ಮ- ಚಾಮರಾಜನಗರ
ಸೈನಿಕ ಕ್ಷೇತ್ರ
ಸುಬೇದಾರ್ ಬಿ.ಕೆ.ಕುಮಾರಸ್ವಾಮಿ- ಬೆಂಗಳೂರು
ಪತ್ರಿಕೋದ್ಯಮ
ಹೆಚ್.ಆರ್.ಶ್ರೀಶಾ- ಬೆಂಗಳೂರು
ಜಿ.ಎಂ.ಶಿರಹಟ್ಟಿ- ಗದಗ
ವಿಜ್ಞಾನ ಮತ್ತು ತಂತ್ರಜ್ಞಾನ
ಕೆ.ಶಿವನ್- ಬೆಂಗಳೂರು
ಡಿ.ಆರ್.ಬಳೂರಗಿ- ರಾಯಚೂರು
ಕೃಷಿ
ಗಣೇಶ್ ತಿಮ್ಮಯ್ಯ- ಕೊಡಗು
ಚಂದ್ರಶೇಖರ್ ನಾರಾಯಣಪುರ- ಚಿಕ್ಕಮಗಳೂರು
ಪರಿಸರ
ಸಾಲುಮರದ ನಿಂಗಣ್ಣ- ರಾಮನಗರ
ಪೌರಕಾರ್ಮಿಕ ಕ್ಷೇತ್ರ
ಮಲ್ಲಮ್ಮ ಹೂವಿನಹಡಗಲಿ- ವಿಜಯನಗರ
ಆಡಳಿತ
ಎಲ್.ಹೆಚ್.ಮಂಜುನಾಥ್- ಶಿವಮೊಗ್ಗ
ಮದನ್ ಗೋಪಾಲ್- ಬೇಂಗಳೂರು
ಹೊರನಾಡು
ದೇವಿದಾಸ ಶೆಟ್ಟಿ- ಮುಂಬಯಿ
ಅರವಿಂದ್ ಪಾಟೀಲ್- ಹೊರನಾಡು
ಕೃಷ್ಣಮೂರ್ತಿ ಮಾಂಜಾ- ತೆಲಂಗಾಣ
ಹೊರದೇಶ
ರಾಜ್‌ಕುಮಾರ್- ಗಲ್ಫ್
ವೈದ್ಯಕೀಯ
ಡಾ.ಹೆಚ್.ಎಸ್.ಮೋಹನ್- ಶಿವಮೊಗ್ಗ
ಡಾ.ಬಸವಂತಪ್ಪ- ದಾವಣಗೆರೆ
ಸಂಗೀತ
ನಾರಾಯಣ.ಎಂ- ದಕ್ಷಿಣ ಕನ್ನಡ
ಅನಂತಚಾರ್ಯ ಬಾಳಾಚಾರ್ಯ- ಧಾರವಾಡ
ಅಂಜಿನಪ್ಪ ಸತ್ಪಾಡಿ- ಚಿಕ್ಕಬಳ್ಳಾಪುರ
ಅನಂತ ಕುಲಕರ್ಣಿ- ಬಾಗಕೋಟೆ
ಜಾನಪದ
ಸಹಮದೇವಪ್ಪ ಈರಪ್ಪ ನಡಿಗೇರ್- ಉತ್ತರ ಕನ್ನಡ
ಗುಡ್ಡ ಪಾಣಾರ- ಉಡುಪಿ
ಕಮಲಮ್ಮ ಸೂಲಗಿತ್ತಿ- ರಾಯಚೂರು
ಸಾವಿತ್ರಿ ಪೂಜಾರ್-ಧಾರವಾಡ
ರಾಚಯ್ಯ ಸಾಲಿಮಠ- ಬಾಗಕೋಟೆ
ಮಹೇಶ್ವರ್ ಗೌಡ- ಹಾವೇರಿ
ಯಕ್ಷಗಾನ
ಶ್ರೀ ಎಂ.ನ.ನಾಯಕ್ -ಉಡುಪಿ
ಶ್ರೀ ಸುಬ್ರಹ್ಮಣ್ಯ ಧಾರೇಶ-ಉತ್ತರ ಕನ್ನಡ
ಶ್ರೀ ಸರಪಾಡಿ ಅಶೋಕ್ ಶೆಟ್ಟಿ -ದಕ್ಷಿಣ ಕನ್ನಡ
ಬಯಲಾಟ
ಶ್ರೀ ಅಡವಯ್ಯ ಚ ಹಿರೇಮಠ್ ( ದೊಡ್ಡಾಟ) ಧಾರವಾಡ
ಶ್ರೀ ಶಂಕರಪ್ಪ ಮಲ್ಲಪ್ಪ ಹೊರಪೇಟೆ ಕೊಪ್ಪಳ
ಶ್ರೀ ಹೆಚ್ ಪಾಂಡುರಂಗಪ್ಪ ತಂದೆ ಹೆಚ್.ಮೀನಾಕ್ಷಪ್ಪ ಬಳ್ಳಾರಿ
ಸಾಹಿತ್ಯ
ಶ್ರೀ ಶಂಕರ ಚಚಡಿ -ಬೆಳಗಾವಿ
ಪ್ರೊ.ಕೃಷ್ಣೇಗೌಡ -ಮೈಸೂರು
ಶ್ರೀ ಅಶೋಕ್ ಬಾಬು ನೀಲಗಾರ್ -ಬೆಳಗಾವಿ
ಪ್ರೊ.ಅ.ರಾ.ಮಿತ್ರ -ಹಾಸನ
ಶ್ರೀ ರಾಮಕೃಷ್ಣ ಮರಾಠೆ -ಕಲಬುರಗಿ
ಶಿಕ್ಷಣ
ಶ್ರೀ ಕೋಟಿ ರಂಗಪ್ಪ -ತುಮಕೂರು
ಡಾ.ಎಂ.ಜಿ.ನಾಗರಾಜ್ ಸಂಶೋಧಕರು- ಬೆಂಗಳೂರು
ಕ್ರೀಡೆ
ಶ್ರೀ ದತ್ತಾತ್ರೇಯ ಗೋವಿಂದ ಕುಲಕರ್ಣಿ- ಧಾರವಾಡ
ಶ್ರೀ ರಾಘವೇಂದ್ರ ಅಣ್ಣೀಕರ್ -ಬೆಳಗಾವಿ
ನ್ಯಾಯಾಂಗ
ಶ್ರೀ ವೆಂಕಚಾಚಲಪತಿ- ಬೆಂಗಳೂರು
ಶ್ರೀ ನಂಜುಂಡ ರೆಡ್ಡಿ- ಬೆಂಗಳೂರು
ನೃತ್ಯ
ಶ್ರೀ ಕಮಲಾಕ್ಷಾಚಾರ್ಯ- ದಕ್ಷಿಣ ಕನ್ನಡ
ಸಮಾಜಸೇವೆ
ಶ್ರೀ ರವಿ ಶೆಟ್ಟಿ- ದಕ್ಷಿಣ ಕನ್ನಡ
ಶ್ರೀ ಸಿ.ಕರಿಯಪ್ಪ -ಬೆಂಗಳೂರು ಗ್ರಾಮಾಂತರ
೩.ಶ್ರೀ ಎಂ.ಎಸ್.ಕೋರಿ ಶೆಟ್ಟರ್- ಹಾವೇರಿ
೪.ಶ್ರೀ ಡಿ.ಮಾದೇಗೌಡ- ಮೈಸೂರು
೫.ಶ್ರೀ ಬಲಬೀರ್ ಸಿಂಗ್ -ಬೀದರ್
ವಾಣಿಜ್ಯೋದ್ಯಮ
ಶ್ರೀ ಬಿ.ವಿ.ನಾಯ್ಡು -ಬೆಂಗಳೂರು
ಶ್ರೀ ಜಯರಾಮ ಬನಾನ್- ಉಡುಪಿ
ಶ್ರೀ ಜಿ.ಶ್ರೀನಿವಾಸ್ -ಕೋಲಾರ
ರಂಗಭೂಮಿ
ಶ್ರೀ ತಿಪ್ಪಣ್ಣ ಹೆಳವರ್ ಯಾದಗಿರಿ
ಶ್ರೀಮತಿ ಲಲಿತಾಬಾಯಿ ಚನ್ನದಾಸರ್- ವಿಜಯಪುರ
ಶ್ರೀ ಗುರುನಾಥ್ ಹೂಗಾರ್ -ಕಲಬುರಗಿ
ಶ್ರೀ ಎಂ.ಪ್ರಭಾಕರ ಜೋಶಿ-ತಾಳಮದ್ದಳೆ-ಯಕ್ಷಗಾನ ಉಡುಪಿ
ಶ್ರೀ ಶೈಲ ಹುದ್ದಾರ್ -ಹಾವೇರಿ
ಸಂಘ ಸಂಸ್ಥೆಗಳು
೧.ಶ್ರೀ ರಾಮಕೃಷ್ಣ ಆಶ್ರಮ -ಮೈಸೂರು
೨.ಲಿಂಗಾಯುತ ಪ್ರಗತಿಶೀಲ ಸಂಸ್ತೆ -ಗದಗ
೩.ಅಗಡಿ ತೋಟ -ಹಾವೇರಿ
೪.ತಲಸೇಮಿಯಾ ಮತ್ತು ಹೀಮೋಫೀಲಿಯ ಸೊಸೈಟಿ- ಬಾಗಲಕೋಟೆ
೫.ಅಮೃತ ಶಿಶು ನಿವಾಸ ಬೆಂಗಳೂರು
೬.ಸುಮನಾ ಫೌಂಡೇಶನ್ ಬೆಂಗಳೂರು
೭.ಯುವವಾಹಿನಿ ಸಂಸ್ಥೆ- ದಕ್ಷಿಣ ಕನ್ನಡ
೮.ನೆಲೆ ಫೌಂಡೇಶನ್, ಅನಾಥ ಮಕ್ಕಳ ಪುನರ್ವಸತಿ ಕೇಂದ್ರ -ಬೆಂಗಳೂರು
೯.ನಮ್ಮನೆ ಸುಮ್ಮನೆ-ನಿರಾಶ್ರಿತ ಆಶ್ರಮ (ಮಂಗಳಮುಖಿ ಸಂಸ್ಥೆ) -ಬೆಂಗಳೂರು
೧೦.ಶ್ರೀ ಉಮಾಮಪೇಶ್ವರಿ ಹಿಂದುಳಿದ ವರ್ಗ ಅಭಿವೃದ್ದಿ ಟ್ರಸ್ಟ್ -ಮಂಡ್ಯ