ಸುಳ್ಯ: ಸುಳ್ಯದ ಜಗತ್ ಫೌಂಡೇಶನ್ ವತಿಯಿಂದ ಹೋಮ್ ಗಾರ್ಡ್ಸ್ಗಳಿಗೆ ರೈನ್ ಕೋಟ್ ಹಾಗೂ ಕೊಡೆಗಳ ವಿತರಣೆ ನಡೆಯಿತು. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ
ಕರ್ನಾಟಕ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರು ಹಾಗೂದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ವಿತರಿಸಿದರು. ಈ ಸಂದರ್ಭದಲ್ಲಿ ಸುಪ್ರೀತ್ ಮೋಂಟಡ್ಕ, ಜೇನು ಸೊಸೈಟಿಯ ಸಿಬ್ಬಂದಿಗಳಾದ ಚೈತ್ರ, ಪುನೀತ್ ಮತ್ತಿತರರು ಉಪಸ್ಥಿತರಿದ್ದರು.