ಮುಲ್ಲನಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ.
ಈ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ 19 ಅಂಕಗಳನ್ನು ಗಳಿಸಿವೆ. ಆದರೆ ರನ್ರೇಟ್ನಲ್ಲಿ ಪಂಜಾಬ್ ಮೊದಲ ಹಾಗೂ ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ. ತಲಾ 14 ಪಂದ್ಯಗಳನ್ನು
ಆಡಿ ತಲಾ 4 ಸೋತು, 9ರಲ್ಲಿ ಜಯಿಸಿವೆ. ಮಳೆಯಿಂದ ಒಂದೊಂದು ಪಂದ್ಯ ರದ್ದಾಗಿವೆ. ಪಂಜಾಬ್ ಮತ್ತು ಆರ್ಸಿಬಿ ತಂಡಗಳು ಲೀಗ್ ಹಂತದಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾದಾಗ ತಲಾ ಒಂದು ಪಂದ್ಯ ಜಯಿಸಿತ್ತು.
ಎರಡೂ ತಂಡಗಳು ಇದುವರೆಗೂ ಪ್ರಶಸ್ತಿ ಜಯಿಸಿಲ್ಲ. ಕಿಂಗ್ಸ್ ತಂಡವು 11 ವರ್ಷಗಳ ನಂತರ ಕ್ವಾಲಿಫೈಯರ್ ಪ್ರವೇಶ ಗಿಟ್ಟಿಸಿದೆ.ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ ಮತ್ತು ಟಿಮ್ ಡೇವಿಡ್ ಉತ್ತಮ ಲಯದಲ್ಲಿರುವುದು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ
ಶಕ್ತಿ, ಆಲ್ರೌಂಡರ್ಗಳು ಕೃಣಾಲ್ ಪಾಂಡ್ಯ (15 ವಿಕೆಟ್) ಮತ್ತು ರೊಮೆರಿಯೊ ಶೆಫರ್ಡ್. ಇವರೂ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದವರು.ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಜಲ್ವುಡ್ ತಂಡಕ್ಕೆ ಮರಳಿದ್ದಾರೆ.ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ಅವರು ತಮ್ಮ ಪೂರ್ಣ ಸಾಮರ್ಥ್ಯ ವಿನಿಯೋಗಿಸುವ ಸವಾಲು ಇದೆ. ಸ್ಪಿನ್ ವಿಭಾಗದಲ್ಲಿ ಪಂದ್ಯ ಗೆಲ್ಲಿಸುವ ಸಮರ್ಥ ಬೌಲರ್ಗಳ ಕೊರತೆ ಇದೆ. ಪಂಜಾಬ್ ಕಿಂಗ್ಸ್ನ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ಗಳು ತಲಾ 400ಕ್ಕಿಂತ ಹೆಚ್ಚು ರನ್ಗಳನ್ನು ಗಳಿಸಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್, ಪ್ರಭಸಿಮ್ರನ್ ಸಿಂಗ್ (499) ಮತ್ತು ಪ್ರಿಯಾಂಶ್ ಆರ್ಯ ಅವರು ಅಮೋಘ ಲಯದಲ್ಲಿದ್ದಾರೆ.
ಮಧ್ಯಮಕ್ರಮಾಂಕದಲ್ಲಿ ನೆಹಲ್ ವದೇರಾ ಶಶಾಂಕ್ ಸಿಂಗ್ ಮತ್ತು ಜೋಶ್ ಇಂಗ್ಲಿಸ್ ಅವರು ಕೂಡ ತಂಡದ ಬ್ಯಾಟಿಂಗ್ ವಿಭಾಗವನ್ನು ಬಲಾಢ್ಯಗೊಳಿಸಿದ್ದಾರೆ.ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಹರಪ್ರೀತ್ ಬ್ರಾರ್ ವೇಗಿ ಅರ್ಷದೀಪ್ ಸಿಂಗ್ ಕೂಡ ಉತ್ತಮ ಲಯದಲ್ಲಿದ್ದಾರೆ.