ಸುಳ್ಯ:ಸುಳ್ಯ ರೋಟರಿ ಕ್ಲಬ್ ಸದಸ್ಯ ಸಿ.ಎಚ್. ಪ್ರಭಾಕರನ್ ನಾಯರ್ ಅವರನ್ನು ಪರಿಸರ ಸಂರಕ್ಷಣೆ ವಿಭಾಗದಲ್ಲಿ ನೀಡಲಾಗುವ ‘ಅನ್ ಸಂಗ್ ಹೀರೋ – ಪರಿಸರ ಸಂರಕ್ಷಣೆ’ ಪ್ರಶಸ್ತಿ ಲಭಿಸಿದೆ. ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ನಾಯರ್, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ ಮೋಹನ್, ಕಾರ್ಯದರ್ಶಿ ಭಾಸ್ಕರನ್ ನಾಯರ್, ನಿಯೋಜಿತ ಅಧ್ಯಕ್ಷೆ ಲತಾ ಮಧುಸೂಧನ್, ಮಧುಸೂಧನ್, ಪ್ರಭಾಕರನ್ ನಾಯರ್ ಸ್ವಾಗತ್, ಡಾ. ಕೇಶವ ಪಿ.ಕೆ., ಪುರುಷೋತ್ತಮ ಕೆ.ಜಿ., ಹರಿರಾಯ ಕಾಮತ್, ಜಿತೇಂದ್ರ ಎನ್.ಎ., ಉಪಸ್ಥಿತರಿದ್ದರು.
ಸುಳ್ಯದ ಸಾಮಾಜಿಕ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಪ್ರಭಾಕರ ನಾಯರ್ ಹಲವು ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದು ಕಳೆದ ಹಲವು ವರ್ಷಗಳಿಂದ ಸ್ವಯಂಪ್ರೇರಿತವಾಗಿ ಸುಳ್ಯ ತಾಲೂಕು ಕಚೇರಿ ಮುಂಭಾಗದ ಪರಿಸರ ಸೇರಿದಂತೆ ಕಸ ಹೆಕ್ಕಿ ಸ್ವಚ್ಛಗೊಳಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.







