ಕಲ್ಲಪಳ್ಳಿ: ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಬದಿಯಲ್ಲಿಯೇ ಕಾಡಾನೆ ಹಿಂಡು ಬೀಟು ಬಿಟ್ಟಿರುವುದು ಆತಂಕ ಸೃಷ್ಠಿಸಿದೆ. ಅಂತಾರಾಜ್ಯ ರಸ್ತೆಯಲ್ಲಿ ಕಲ್ಲಪಳ್ಳಿ ಸಮೀಪ
ಗಡಿಗುಡ್ಡೆ ಬಳಿಯಲ್ಲಿ ಕ್ಯಾಶ್ಯೂ ಪ್ಲಾಂಟೇಷನ್ನಲ್ಲಿ ಮರಿ ಸೇರಿದಂತೆ ಕಾಡಾನೆ ಹಿಂಡು ಕಾಣಿಸಿಕೊಂಡಿದೆ. ಸಂಜೆಯ ವೇಳೆಯಲ್ಲಿ ರಸ್ತೆ ಸಮೀಪ ಸಣ್ಣ ಕಾಡು ಪೊದೆಯಲ್ಲಿ ಆನೆ ಹಿಂಡು ಬೀಡು ಬಿಟ್ಟಿತ್ತು. ಅಂತಾರಾಜ್ಯ ರಸ್ತೆಯಲ್ಲಿ ಪ್ರಯಾಣಿಸುವವರು ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರು ಸೂಚಿಸಿದ್ದಾರೆ. ಕಳೆದ ವಾರ ಕಲ್ಲಪಳ್ಳಿ ಮಾಂಬಳ ಭಾಗ ಸೇರಿ ವಿವಿಧೆಡೆ ಕಾಡಾನೆಗಳು ದಾಳಿ ಮಾಡಿ ಕೃಷಿ ನಾಶ ಪಡಿಸಿತ್ತು.







