ದಂಬುಲಾ:ಭಾರತ ‘ಎ’ ತಂಡದ ಯುವ ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, ಕೇವಲ 11 ಎಸೆತಗಳಲ್ಲೇ ಅರ್ಧಶತಕ ಗಳಿಸಿ ಮಿಂಚಿದ್ದಾರೆ. ಶ್ರೀಲಂಕಾ ‘ಎ’ ವಿರುದ್ಧ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ಪೈನಲ್ ಪಂದ್ಯದಲ್ಲಿ ವೈಭವ್ ಅಬ್ಬರಿಸಿದ್ದಾರೆ. ಅಲ್ಲದೆ ಲಿಸ್ಟ್ ‘ಎ’ ಕ್ರಿಕೆಟ್ನಲ್ಲಿ
ವೇಗದ ಅರ್ಧಶತಕ ಗಳಿಸಿದ ಬ್ಯಾಟರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಪ್ರಿಯಾಂಶ್ ಆರ್ಯ ಜೊತೆಗೂಡಿದ ವೈಭವ್ ಮೊದಲ ವಿಕೆಟ್ಗೆ 8.5 ಓವರ್ಗಳಲ್ಲೇ 132 ರನ್ಗಳ ಜೊತೆಯಾಟ ಕಟ್ಟಿದ್ದಾರೆ. ಈ ಪೈಕಿ 7ನೇ ಓವರ್ನಲ್ಲೇ ಭಾರತದ ಮೊತ್ತ 100ರ ಗಡಿ ದಾಟಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಕೇವಲ ಆರು ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. 29 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 94 ರನ್ ಗಳಿಸಿ ಔಟ್ ಆದರು.
ಶ್ರೀಲಂಕಾ ‘ಎ’ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಭಾರತ ಸೂಪರ್ ಓವರ್ನಲ್ಲಿ ಪರಾಭವಗೊಂಡಿತ್ತು. ಈ ಪಂದ್ಯದಲ್ಲಿ ವೈಭವ್ ಹಾಗೂ ಶ್ರೀಲಂಕಾ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈಗ ಫೈನಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಭಾರತ ಎ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿದೆ. ನಾಯಕ ತಿಲಕ್ ವರ್ಮ(67), ಋತುರಾಜ್ ಗಾಯಕ್ವಾಡ್(40), ಪ್ರಿಯಾನ್ಸ್ ಆರ್ಯ(39), ಕುಮಾರ್ ಕುಶಾಗ್ರ(36), ಅನ್ಕುಲ್ ರಾಯ್(39) ರನ್ ಗಳಿಸಿದರು.







