ಸುಳ್ಯ:ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಸುವುದನ್ನು ಕಲಿಸುತ್ತದೆ. ಯಾವ ಧರ್ಮಗಳೂ ದ್ವೇಷವನ್ನು ಕಲಿಸುವುದಿಲ್ಲ, ಬದಲಾಗಿ ಪ್ರೀತಿ ಮತ್ತು ಸೌಹಾರ್ದತೆಯನ್ನು ಕಲಿಸಿದೆ. ಮಸೀದಿ, ಮಂದಿರ, ಚರ್ಚ್ಗಳು ಶಾಂತಿ ಮತ್ತು ಸೌಹಾರ್ತೆಯ ಕೇಂದ್ರಗಳು ಎಂದು ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಗೂನಡ್ಕದಲ್ಲಿ ನಡೆದ ಉರೂಸ್ ಸಮಾರಂಭದ ಪ್ರಯುಕ್ತ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಪ್ರಮುಖರು
ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಚ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು. ಖತೀಬರಾದ ಅಹಮದ್ ನಈಮಿ ಫೈಝಿ ಅಲ್ ಮಅಬರಿ ದುವಾ ನೆರವೇರಿಸಿದರು.

ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ, ಇಕ್ಬಾಲ್ ಬಾಳಿಲ, ಪ್ರೊಫೆಸರ್ ಡಾ. ಲಕ್ಷ್ಮೀಶ, ಡಾ. ಉಮ್ಮರ್ ಬೀಜದಕಟ್ಟೆ, ಸಂಪಾಜೆ ಚರ್ಚ್ ಆಡಳಿತ ಮಂಡಳಿಯ ಸದಸ್ಯ ಲೂಕಾಸ್ ಟಿ ಐ,ವಕೀಲ ರಶೀದ್ ಗೂನಡ್ಕ ಮಾತನಾಡಿದರು. ವೇದಿಕೆಯಲ್ಲಿ ಜಮ್ಮು-ಕಾಶ್ಮೀರ ಸಿ ಆರ್ ಪಿ ಎಫ್ ಇನ್ಸ್ ಪೆಕ್ಟರ್ ಅನ್ವರ್ ಪಿಎಂ ತೆಕ್ಕಿಲ್, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ಕಾರ್, ಸಂಪಾಜೆ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಜಗದೀಶ್ ರೈ ಕೆ ಪಿ, ಮಂಗಳೂರು ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಾಧಿಕ್ ಪೇರಡ್ಕ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು ಬಿ ಚಕ್ರಪಾಣಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮೀಫ್ ಉಪಾಧ್ಯಕ್ಷ ಹಾಜಿ ಮುಸ್ತಫ ಜನತಾ, ಸುಳ್ಯ ಅಲ್ಪಸಂಖ್ಯಾತ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ವಕೀಲ ಸಲೀಂ ಗೂನಡ್ಕ,ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಕೆಎಸ್ ಉಮ್ಮರ್, ನಾಮನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೋ, ಮಂಗಳೂರು ಪೊಲೀಸ್ ಇಲಾಖೆಯ ರಹೂಫ್ ಗೂನಡ್ಕ, ನಿವೃತ್ತ ಯೋಧ ಲಕ್ಷ್ಮೀನಾರಾಯಣ,ವಸಂತ ಗೌಡ ಪೆರಾಡ್ಕ,ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯ ಮುಜೀಬ್ ಪೈಚಾರ್, ಮುಖಂಡರುಗಳಾದ ಆಲಿ ಹಾಜಿ , ಸಂತೋಷ್ ಕ್ರಾಸ್ತ, ಆಶ್ರಫ್ ಗುಂಡಿ, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು , ಮೊದಲಾದವರು ಭಾಗವಹಿಸಿದ್ದರು.
ಮುಹಿಯದ್ದೀನ್ ರಿಪಾಯಿ ದಫ್ ಅಸೋಷಿಯೇಷನ್ ಅಧ್ಯಕ್ಷ ಜಿ ಕೆ ಹಮೀದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳಾದ ನಿವೃತ್ತ ಸೇನಾನಿಗಳು ಹಾಗೂ, ದಾನಿಗಳು ಮತ್ತು ಹಜ್ ಯಾತ್ರಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.