ಪಂಜ:ಪಂಜ ವಲಯ ಕಾಂಗ್ರೆಸ್ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೇಶವ ಕುದ್ವ, ಕಾರ್ಯದರ್ಶಿಯಾಗಿ ಅಶೋಕ್ ಡಿ’ಸೋಜ,ಜೊತೆ ಕಾರ್ಯದರ್ಶಿಯಾಗಿ ಬಾಲಚಂದ್ರ ಕರಿಮಾಜಲು, ಉಪಾಧ್ಯಕ್ಷರಾಗಿ
ರಫೀಕ್ ಐವತೊಕ್ಲು, ನವೀನ್ ಚಂದ್ರ ಕಂಬಳ, ಮೊಹಮ್ಮದ್ ನೆಮನಕಜೆ, ಲಕ್ಷ್ಮಣ ಕುಲ್ಲಕ್ಕೋಡಿ,ರವಿ ಚಲ್ಲಕ್ಕೋಡಿ, ಜಮಾಲ್ ಪಂಜ,ಸಲೀನ ಡಿ.ಸೋಜ, ಧರ್ಮಪಾಲ ನೆಕ್ಕಿಲ, ದೇವಣ್ಣ ನಾಯ್ಕ್ ಕೊಟ್ರಂಜ, ಡಾ. ಪ್ರಕಾಶ್ ಡಿ’ಸೋಜ,ರಾಮಚಂದ್ರ ಅಡ್ಡತೊಡು, ಸಂತೋಷ್ ಕುಳ್ಳಜೆ, ದುರ್ಗಾಕುಮಾರ್ ಬಸ್ತಿಕಾಡು ಆಯ್ಕೆಯಾದರು. ಹಾಗೂ ಪಂಜದ ಹಿರಿಯ ಕಾಂಗ್ರೆಸ್ ನಾಯಕರನ್ನು ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು.
ಕೇಶವ ಕುದ್ವ, ಅಶೋಕ್ ಡಿ’ಸೋಜ,
ಸಭೆಯ ಅಧ್ಯಕ್ಷ ತೆಯನ್ನು ಕಲ್ಮಡ್ಕ ಗ್ರಾಮಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜೀವಿ ರೈ ಪುಡ್ಕಾಜೆ, ಶ್ರೇಯಾಂಶು ಕುಮಾರ್ ಶೆಟ್ಟಿಮೂಲೆ,
ಕಾಯಂಬಾಡಿ ಸತ್ಯನಾರಾಯಣ ಭಟ್ ಉಪಸ್ಥಿರಿದ್ದರು. ಲೋಕಸಭಾ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ
ರಾಜೀವಿ ರೈ ಅವರು ಅಭಿನಂದಿಸಿದರು. ಸಭಿಕರ ಪರವಾಗಿ
ಲಕ್ಷ್ಮಣ ಬೊಳ್ಳಜೆ, ರಫೀಕ್ ಐವತ್ತೊಕ್ಲು ಹಾಗು ಚಿನ್ನಪ್ಪ ಸಂಕಡ್ಕ ಅನಿಸಿಕೆಗಳನ್ನು ಹೇಳಿದರು. ಡಾ. ದೇವಿಪ್ರಸಾದ್ ಕಾನತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚಿನ್ನಪ್ಪ ಸಂಕಡ್ಕ್ಕ ವಂದಿಸಿದರು
ಸಭೆಯಲ್ಲಿ ದಿನೇಶ್ ಪುಂಡಿಮನೆ,ಗಂಗಾಧರ ಗುಂಡಡ್ಕ, ವಸಂತಕುಮಾರ್ ಕೆದ್ಲ, ಜಯರಾಮ ಕಂಬಳ, ಮಥಾಯಿಸ್ ಡಿಸೋಜ, ಕುಸುಮಾಧರ ಕೆರೆಯಡ್ಕ, ಲೋಕನಾಥ್ ಕುದ್ವ ಹಾಗೂ ಪಂಜ ವಲಯದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು