ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದು (ಮಾ.12) ಶ್ರೀ ದೇವರಿಗೆ ರಂಗಪೂಜೆ, ಬೀದಿ ನೇಮ ನಾಳೆ (ಮಾ.13) ಶ್ರೀ ಆದಿಬೈದೆರುಗಳ ನೇಮೋತ್ಸವ ನಡೆಯಲಿದೆ.ಮಾ. 12.ರಂದು ಸಂಜೆ ಗಂಟೆ 6 ರಿಂದ ರಂಗಪೂಜೆ, ಬೀದಿನೇಮ, ಅನ್ನಸಂತರ್ಪಣೆ, ರಾತ್ರಿ ಗಂಟೆ 8 ರಿಂದ ಪರಿವಾರ ದೈವಗಳಾದ
ಕಾಚುಕುಜುಂಬ, ಉಳ್ಳಾಕುಲು, ಮಹಿಷಂತಾಯ, ವ್ಯಾಘ್ರ ಚಾಮುಂಡಿ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ, ಪುರುಷ ದೈವ, ಪೊಟ್ಟ ಭೂತ ಹಾಗೂ ಗುಳಿಗ ದೈವಗಳಿಗೆ ನರ್ತನ ಸೇವೆ ನಡೆಯಲಿದೆ.
ಮಾ.13 ರಂದು ರಾತ್ರಿ ಗಂಟೆ 10ರಿಂದ ಶ್ರೀ ಆದಿ ಬೈದೆರ್ಕಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.