ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಒಂಭತ್ತನೇ ದಿನವಾದ ಸೆ.30ರಂದು ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಮಹಾಪೂಜೆ, ನಡೆಯಿತು. ಸಂಜೆ ಭಜನಾ ಸಂಕೀರ್ತನೆ, ರಾತ್ರಿಕಲಾ ಸೇವೆ ನಡೆಯಿತು. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.ಸಂಜೆ ಶಿವಳ್ಳಿ ಸಂಪದ ಪಂಜ ವಲಯ ವತಿಯಿಂದ ಭಜನಾ ಸಂಕೀರ್ತನೆ, ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಆದ್ಯಾ ಬಾಬ್ಲುಬೆಟ್ಟು ಮತ್ತು ಸ್ನೇಹ ಪಿ. ರಾವ್ ಇವರಿಂದ ‘ಭರತನಾಟ್ಯ ನೃತ್ಯ’ ಕಾರ್ಯಕ್ರಮ ನಡೆಯಿತು.
ಆಯುಧ ಪೂಜೆ:ಅ.1ರಂದು ಆಯುಧ ಪೂಜೆ ಮತ್ತು ವಾಹನ ಪೂಜೆ ನಡೆಯಿತು. ನೂರಾರು ವಾಹನಗಳು ಕ್ಷೇತ್ರಕ್ಕೆ ಆಗಮಿಸಿ ಪೂಜೆ ನಡೆಯಿತು.
















